ಸಿರುಗುಪ್ಪ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಸಿರುಗುಪ್ಪ 14: ನಗರದ ಸರಕಾರಿ ಉರ್ದು ಮಾಧ್ಯಮ ಪ್ರೌಢ ಶಾಲೆಯ 16 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಎಲ್ಲರೂ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಮುಖ್ಯ ಗುರುಗಳಾದ ಶಹರ ಬೇಗಂ ತಿಳಿಸಿದರು. ಪರೀಕ್ಷೆಯಲ್ಲಿನ ಯಶಸ್ವಿಗಾಗಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸರಕಾರಿ ಉರ್ದು ಮಾಧ್ಯಮ ಪ್ರೌಢಶಾಲೆಯ ಸದಸ್ಯರು ಸಮಾಜ ಸುಧಾರಕ ಹಾಜಿ  ಅಬ್ದುಲ್‌ನಬಿ ಚಿಸ್ತಿ  ನಿಜಾಮಿ ಅವರು ಹಾರ್ದಿಕವಾಗಿ ಮುಖ್ಯ ಗುರುಗಳಿಗೆ ಶಿಕ್ಷಕಿಯರಿಗೆ ಸಿಬ್ಬಂದಿ ವರ್ಗದವರಿಗೆ  ಅಭಿನಂದಿಸಿದರು. ಸರಕಾರಿ ಉರ್ದು ಮಾಧ್ಯಮ ಪ್ರೌಢ ಶಾಲೆ ಇದನ್ನು ಅಲ್ಪಸಂಖ್ಯಾತರ ಮಕ್ಕಳು ಶೈಕ್ಷಣಿಕ ಆರ್ಥಿಕ ಸಾಮಾಜಿಕ ವಾಗಿ ಸದೃಢಗೊಳ್ಳಲು ಪದವಿ ಪೂರ್ವ ಕಾಲೇಜ್ ನ್ನಾಗಿ ಪರಿವರ್ತಿಸಿ ಮೇಲ್ದರ್ಜೇಗೆ ಏರಿಸಲು ಸರಕಾರಕ್ಕೆ ಪತ್ರ ಬರೆದಿರುವುದಾಗಿ ಅಬ್ದುಲ್ ನಬಿ ಈ ಸಂದರ್ಭದಲ್ಲಿ ತಿಳಿಸಿದರು. ಉನ್ನತ ಶಿಕ್ಷಣ ಇಲಾಖೆಗೆ ಸರ್ಕಾರದ ಆಧೀನ ಕಾರ್ಯದರ್ಶಿ ಗಳು ಜನ ಸ್ಪಂದನ ಆಡಳಿತ ಸುಧಾರಣೆ ಇಲಾಖೆ ಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎಂದರು.  ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ  ಕಾರ್ಯಕ್ರಮಕ್ಕೆ ಮುಖ್ಯ ಗುರುಗಳು ಈ ಸಂದರ್ಭದಲ್ಲಿ ಅಬ್ದುಲ್ ನಬಿಯವರನ್ನು ರಾಷ್ಟ್ರಧ್ವಜ ನೆರವೇರಿಸಲು ಆಹ್ವಾನಿಸಿದರು. 


ಸುದ್ದಿ ಓದಿ