ಸುಳೆಭಾವಿಯ ರಮೇಶ ಜಾರಕಿಹೊಳಿ ಅಭಿಮಾನಿಗಳ ಸಮಾವೇಶಕ್ಕೆ ಸಂಜಯ ಪಾಟೀಲ ಅಪಸ್ವರ : ಬಿಜೆಪಿ ಕಾರ್ಯಕ್ರಮ ಅಲ್ಲ ಅದು, ಅಲ್ಲಿ ನಮ್ಮದು ಎನು ಕೆಲಸ

ಸುಳೆಭಾವಿಯ ರಮೇಶ ಜಾರಕಿಹೊಳಿ ಅಭಿಮಾನಿಗಳ ಸಮಾವೇಶಕ್ಕೆ ಸಂಜಯ ಪಾಟೀಲ ಅಪಸ್ವರ : ಬಿಜೆಪಿ ಕಾರ್ಯಕ್ರಮ ಅಲ್ಲ ಅದು, ಅಲ್ಲಿ ನಮ್ಮದು ಎನು ಕೆಲಸ

ಬೆಳಗಾವಿ, ಜ, 20 : ತಾಲೂಕಿನ ಸುಳೇಭಾವಿಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಅಭಿಮಾನಿ ಬಳಗದವರು ಆಯೋಜಿಸಿದ ಸಮಾವೇಶವು ಬಿಜೆಪಿಯ ಕಾರ್ಯಕ್ರಮ ಅಲ್ಲ. ಅಲ್ಲಿ ಬಿಜೆಪಿ ಬ್ಯಾನರ್ ಕೂಡಾ ಇಲ್ಲ. ಅಂತ ಸಮಾವೇಶಕ್ಕೆ ನಾನು ಹೋಗಲು ನನ್ನ ಮನಸ್ಸು ಒಪ್ಪುವದಿಲ್ಲ. ಅದರಿಂದ ನಾನು ಆ‌ ಸಮಾವೇಶಕ್ಕೆ ಹೋಗುವದಿಲ್ಲ ಎಂದು ಮಾಜಿ ಶಾಸಕ ಜಿಲ್ಲಾ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಸ್ಪಷ್ಟ ಪಡಿಸಿದ್ದಾರೆ.

   ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಸುಳೇಭಾವಿಯಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಆಯೋಜನೆ ಮಾಡಿರುವ ಸಮಾವೇಶದಲ್ಲಿ ಬಿಜೆಪಿ ಬ್ಯಾನರ್ ಇರುವದಿಲ್ಲ. ಅದು ಬಿಜೆಪಿ ಕಾರ್ಯಕ್ರಮ ಅಲ್ಲ. ಅಂತ ಸ್ಥಳದಲ್ಲಿ ನಾನು ಒರ್ವ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಹೋಗುವದು ಸರಿಯಲ್ಲ. ಅದಕ್ಕೆ ನನ್ನ ಮನಸ್ಸು ಒಪ್ಪುವದಿಲ್ಲ ಎಂದು ಹೇಳಿದ್ದಾರೆ.

    ಈ ಸಮಾವೇಶಕ್ಕೆ ನಿಮಗೆ ಅವ್ಹಾನ ನೀಡಿಲ್ಲವಾ ಎಂದು ಮಾಧ್ಯಮದವರು  ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ನನಗೆ ಬೇಡ ಅಂದಿಲ್ಲ. ಬಾನು ಅಂದಿಲ್ಲ. ಅಲ್ಲಿ ಯಾರು ಅವರ ಅಭಿಮಾನ ಇರುವವರು ಹೋಗಬಹುದು. ರಮೇಶ ಜಾರಕಿಹೊಳಿ ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಇದು ಬಿಜೆಪಿ ಕಾರ್ಯಕ್ರಮ ಅಲ್ಲ ಅನ್ನುವ ನಿಟ್ಟಿನಲ್ಲಿ ನಾನು ಅಲ್ಲಿ ಹೋಗುವದಿಲ್ಲ ಎಂದು ನುಡಿದರು.

ಗ್ರಾಮೀಣ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ರಮೇಶ ಜಾರಕಿಹೊಳಿ ಅಭಿಮಾನಿಗಳು 

      ಬೆಳಗಾವಿ ಗ್ರಾಮಿಣ ಮತಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದ ವತಿಯಿಂದ ಜ. 20 ರಂದು ಸಂಜೆ 4 ಗಂಟೆಗೆ ರಮೇಶ ಜಾರಕಿಹೊಳಿ ಅಭಿಮಾನಿಗಳಿಂದ ಅಭಿಮಾನದ ಕಾರ್ಯಕರ್ತರ ಸಮಾವೇಶ ಗ್ರಾಮದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

     ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ಸಮಾವೇಶಕ್ಕೆ ಆಗಮಿಸುವ ಜನರಿಗೆ ಎರಡು ಕಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

     ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಜಾರಕಿಹೊಳಿ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಮಾವೇಶ ಹಮ್ಮಿಕೊಂಡಿದ್ದಾರೆ. 

    ವಾರದ ಹಿಂದೆಯಷ್ಟೇ ಹಿಂಡಲಗಾ ಗ್ರಾಮದಲ್ಲಿಯೂ ರಮೇಶ ಜಾರಕಿಹೊಳಿ ಅಭಿಮಾನಿಗಳು ಸಮಾವೇಶ ನಡೆಸಿದ್ದರು. ಈಗ ಮತ್ತೊಂದು ಸಮಾವೇಶಕ್ಕೆ ಗ್ರಾಮೀಣ ಕ್ಷೇತ್ರ ಸಿದ್ಧಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. 


ಸುದ್ದಿ ಓದಿ