ರಾಮದುರ್ಗ

ರಾಮ ಮಂದಿರಕ್ಕೆ ತನು ಮನ ಧನದಿಂದ ಸಹಾಯ ಮಾಡಿ: ಶಾಸಕ ಮಹಾದೇವಪ್ಪ

ರಾಮ ಮಂದಿರಕ್ಕೆ ತನು ಮನ ಧನದಿಂದ ಸಹಾಯ ಮಾಡಿ: ಶಾಸಕ ಮಹಾದೇವಪ್ಪ

ರಾಮದುರ್ಗ 24: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರವ ಭವ್ಯ ರಾಮ ಮಂದಿರಕ್ಕೆ ಎಲ್ಲರೂ ತನು ಮನ ಧನದಿಂದಾ ಸಹಾಯ ಮಾಡಿ ಸನಾತನ ಹಿಂದು ಧರ್ಮದ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯಬೇಕಾದ ಮಹತ್ವದ ಜವಾಬ್ದಾರ ನಮ್ಮೆಲ್ಲರ ಮೇಲೆ ಇದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ಪಟ್ಟಣದ ತಮ್ಮ ಗೃಹ ಕಛೇರಿಯಲ್ಲಿ ಇಐಡಿ ಪ್ಯಾರೀಶ ಹಾಗೂ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ರೂ. 4ಲಕ್ಷಗಳ ಚೆಕ್ಕ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ವಿತರಿಸಿ ಮಾತನಾಡಿದ ಅವರು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಚಲ ನಿರ್ಧಾರ ಫಲವಾಗಿ ರಾಮ ಮಂದಿರ ನಿರ್ಮಾಣಗೊಳ್ಳುತ್ತಿದೆ ಎಂದು ನುಡಿದ ಅವರು ನಾಡಿನ ಸಂಸ್ಕೃತಿಯ ರಕ್ಷಣೆಗೆ ನಾವೆಲ್ಲರೂ ಬದ್ದರಾಗೋಣ ಎಂದರು. 

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣಾ ಯಾದವಾಡ ಮಾತನಾಡಿ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದಾ ಸಾಗುತ್ತಿದೆ ಹಾಗೂ ಸಹಾಯ ಧನವು ಕೂಡಾ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷವ್ಯಕ್ತಪಡಿಸಿದರು. ರಾಷ್ಟ್ರೀಯ ಸಯಂ ಸೇವಕ ಸಂಘದ ವಿಜಯ ಜೋಶಿ, ರಾಜು ಶಿರೋ¼, ಇಐಡಿ ಪ್ಯಾರಿಸದ ಪ್ರಧಾನ ವ್ಯವಸ್ಥಾಪಕ ರವೀಂದ್ರ ದೇಸಾಯಿ, ಕಬ್ಬು ವ್ಯವಸ್ಥಾಪಕ ಕೆ ಎಚ್ ಬೂದಿ, ಬಿ ಡಿ ಪಾರಶೆಟ್ಟಿ, ಎಚ್ ಆರ್ ರೂಪೇಶ ಪತ್ತಾರ ಹಾಗೂ ರಾಷ್ಟ್ರೀಯ ಸ್ವಯಂ ಸೇವಕರು ಹಾಜರಿದ್ದರು.

ಸುದ್ದಿ ಓದಿ