ತಪ್ಪದೇ ಕೋವಿಡ್ಲಸಿಕೆ ಹಾಕಿಸಿಕೊಳ್ಳಿ: ಬಸವಲಿಂಗೇಶ್ವರ ಶ್ರೀ
ಯಲಬುರ್ಗಾ 24: ದೇಶದೆಲ್ಲೆಡೆ ಕೊರೊನಾ ಸೋಂಕಿನ ಮೂರನೇ ಅಲೆಯ ಆತಂಕ ಎದುರಾಗಿದ್ದು,?ಕಡ್ಡಾಯವಾಗಿ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯುವಂತೆ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳು ಕೋವಿಡ್ ಲಸಿಕೆ ಬಗ್ಗೆ ಜನ ಜಾಗೃತಿ ಮೂಡಿಸಿದರು.
ಪಟ್ಟಣದ ಶ್ರೀಧರ ಮುರಡಿ ಹಿರೇಮಠ ಆವರಣದ ಶ್ರೀ ಬಸವಲಿಂಗೇಶ್ವರ ಯೋಗ ಶಿಬಿರದಲ್ಲಿ ಶುಕ್ರವಾರ ದಂದು ಹಮ್ಮಿಕೊಂಡ. ಕೋವಿಡ್-19 ಲಸಿಕಾ ಅಭಿಯಾನಕ್ಕೆ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು ಚಾಲನೆ ನೀಡಿ, ಮಾತನಾಡಿ, ‘ಪ್ರತಿಯೊಬ್ಬರೂ ಕೋವಿಡ್ ಲಸಿಕೆಯನ್ನು ಪಡೆಯುವ ಮೂಲಕ ಕರೋನಾವನ್ನು ನಮ್ಮ ದೇಶದಿಂದ ಹೋಗಲಾಡಿಸಿ. ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳುವ ಮುಖಾಂತರ ನಿಮ್ಮ ಪ್ರಾಣವನ್ನು ಹಾಗೂ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಿ ಎಂದರು.
ನಂತರ ಆರೋಗ್ಯ ಇಲಾಖೆ ಸಂಯೋಜಕಿ ವಿದ್ಯಾಶ್ರೀ ಕುಡಗುಂಟಿ ಮಾತನಾಡಿ, ‘ನಮ್ಮ ಅರೋಗ್ಯ ಇಲಾಖೆಯಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್ ಲಸಿಕೆ?ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಹಾಗೂ 60 ವರ್ಷ ಮೀರಿದ ಹಾಗೂ ಎಲ್ಲಾ ವಯಸ್ಕರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು ಯಾರು ಭಯಪಡದೆ ಲಸಿಕೆಯನ್ನು ಪಡೆಯುವ ಮೂಲಕ ಆರೋಗ್ಯವಂತ ಜೀವನವನ್ನು ಸುರಕ್ಷಿತವಾಗಿರಿ. ಕೋವಿಡ್ -19 ಬಗ್ಗೆ ಪಟ್ಟಣದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು ಹಾಗೂ ಯೋಗಪಟುಗಳು ಕೋವಿಡ್ ಲಸಿಕೆ ಬಗ್ಗೆ ಮನೆ ಮನೆಗೂ ತೆರಳಿ ಜನಜಾಗೃತಿ ಮೂಡಿಸುತ್ತಿದ್ದು. ಮತ್ತು ಲಸಿಕೆ ವಿಚಾರವಾಗಿ ಜನರಲ್ಲಿ ಭಯ, ಅನುಮಾನಗಳನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದ್ದದ್ದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ದೊಡ್ಡಬಸಪ್ಪ ಹಕಾರಿ, ಶರಣಬಸಪ್ಪ ದಾನಕೈ, ಬಸವಲಿಂಗಪ್ಪ ಕೊತ್ತಲ್, ಬಸವರಾಜ ಸ್ಟಾಂಪಿನ್, ಶಿವುಕುಮಾರ ಅಡಗಲಿ, ಯೋಗಪಟುಗಳು ಭಕ್ತರು ಸೇರಿ ಮತ್ತಿತರಿದ್ದರು.