ದಕ್ಷ ಅಧಿಕಾರಿಗಳಿಗೆ ಗೌರವಿಸುವುದು ಎಲ್ಲರ ಕರ್ತವ್ಯ: ಅನಿಲ ಬಡಿಗೇರ
ಶಿರಹಟ್ಟಿ 05: ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಪಾತ್ರ ದೊಡ್ಡದಾಗಿದೆ, ಅಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಹಶೀಲ್ದಾರ ಅನಿಲ ಬಡಿಗೇರ ಹೇಳಿದರು.
ಪಟ್ಟಣದ ತಾಲೂಕ ಪಂಚಾಯತ್ನ ಕಾರ್ಯಾಲಯದಲ್ಲಿ 05ರ ಮಧ್ಯಾನ್ಹ 01 ಗಂಟೆಗೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಕಳೆದ 15 ತಿಂಗಳುಗಳ ಕಾಲ ಪೊಲೀಸ್ ಸಬ್ ಇನಸ್ಪೆಕ್ಟರಗಳಾಗಿ ನಿಷ್ಠಾವಂತ, ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಲಕ್ಷ್ಮೇಶ್ವರಕ್ಕೆ ವರ್ಗಾವಣೆಗೊಂಡ ಪಿಎಸ್ಐ ಈರಣ್ಣ್ಪ ರಿತ್ತಿ ಅವರಿಗೆ ತಾಲೂಕ ಪಂಚಾಯತ್ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಸನ್ಮಾನಿಸಿ, ಗೌರವಿಸಿ ಬೀಳ್ಕೊಡಲಾಯಿತು.
ನಂತರ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರು ಮಾತನಾಡಿ, ಈರ್ಪ ರಿತ್ತಿಯವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ರಕ್ತದಲ್ಲಿ ದೇಶಪ್ರೇಮ, ಪ್ರಾಮಾಣಿಕತೆ. ಕರ್ತವ್ಯ ನಿಷ್ಠಾವಂತ ಸ್ವಭಾವ ಇದ್ದು, ಶಿರಹಟ್ಟಿಯಲ್ಲಿ ಪಿಎಸ್ಐ ಹುದ್ದೆಯಲ್ಲಿ ಇರುವವರೆಗೂ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹದಗೆಡದಂತೆ ಸೇವೆ ಸಲ್ಲಿಸಿದ್ದಾರೆ ಎಂದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಅನೀಲ ಬಡಿಗೇರ ಮಾತನಾಡಿ, ತಾಲೂಕಿನಲ್ಲಿ ಆಡಳಿತ ಸರಾಗವಾಗಿ ನಡೆಯಬೇಕಾದರೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಗಿ ಕಾರ್ಯ ಮಾಡಿದಾಗ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಅರಣ್ಯ ಇಲಾಖೆ ಅಧಿಕಾರಿಗಳಾದ ರಾಮಪ್ಪ ಪೂಜಾರ, ಕೌಶಿಕ್ ದಳವಾಯಿ, ಸಿಡಿಪಿಓ ಮೃತ್ಯುಂಜಯ ಗುಡ್ಡದ್ದಾನ್ವೇರಿ, ಸಮಾಜ ಕಲ್ಯಾಣ ಅಧಿಕಾರಿ ಶರಣಯ್ಯ ಕುಲಕರ್ಣಿ, ಬಸವರಾಜ ನಾಯ್ಕರ ಸೇರಿದಂತೆ ಅನೇಕರು ಇದ್ದರು.