ಫೆ.20 ರಿಂದ ಸಿಂಧಗಿಯಲ್ಲಿ ಸಂಜೆ ಶ್ರೀಗಳಿಂದ ಪುರಾಣ ಪ್ರವಚನ
Evening discourse on mythology by Sri Sri from Feb. 20 in Sindhagi
ಸಿಂದಗಿ 19: ಪಟ್ಟಣದ ಊರಿನ ಹಿರಿಯ ಮಠದ ಲಿಂ. ಪೂಜ್ಯ ಶಾಂತವೀರ ಪಟ್ಟಾಧ್ಯಕ್ಷರ 46 ನೇ ಸ್ಮರಣೋತ್ಸವ ಹಾಗೂ ಗದುಗಿನ ತೊಂಟದಾರ್ಯ ಮಠದ ಲಿಂ. ಪೂಜ್ಯ ಜಗದ್ಗುರು ಡಾ. ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ 8 ನೇ ಗುರು ಸ್ಮರಣೆ ಸಮಾರಂಭವು ಫೆ.20 ರಿಂದ ಫೆ.27 ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಊರಿನಹಿರಿಯ ಮಠದಲ್ಲಿ ಜರುಗಲಿದೆ. ಫೆ.20 ರಂದು ಜಂಜೆ 7 ಗಂಟೆಗೆ ಊರಿನಹಿರಿಯ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶಿವಾನಂದ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಪುರಾಣ ಪ್ರವಚನ ಉದ್ಘಾಟನೆ ನಡೆಯಲಿದೆ.
ಫೆ.22 ರಂದು ರವಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ಹ್ 4 ಗಂಟಯವರೆಗೆ ನೇತ್ರ, ಎಲುಬು ಕೀಲು ಮತ್ತು ಚರ್ಮ ರೋಗಕ್ಕೆ ಸಂಬಂಧಿಸಿದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದ್ದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಪಾಟೀಲ ಅವರು ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು, ಸಿಂದಗಿಯ ಈಶಾ ಆಸ್ಪತ್ರೆಯ ಡಾ.ವಿವೇಕ ನಿಡೋಣಿ ಅವರು ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಚಿಕಿತ್ಸೆಯನ್ನು ಹಾಗೂ ಡಾ.ನಿಖಿತಾ ಶಹಾಪೂರ ಅವರು ಚರ್ಮ ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದ್ದಾರೆ. ಅಂದು ಸಂಜೆ 7 ಗಂಟೆಗೆ ಆಲಮೇಲದ ಪ್ರಗತಿಪರ ರೈತ ಸುನೀಲ ನಾರಾಯಣಕರ ಅವರು ಜೀವನ ಶೈಲಿ ಮತ್ತು ಆಹಾರ ಪದ್ದತಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಫೆ.23 ರಂದು ಸಂಜೆ 7 ಶಿಕ್ಷಕ ಎಂ.ಬಿ.ಅಲ್ದಿ ಅವರು ರಚಿಸಿದ ಲಿಂ ಶಾಂತವೀರ ಪಟ್ಟಾಧ್ಯಕ್ಷರ ಧ್ವನಿ ಸುರಳಿ ಬಿಡುಗಡೆ ಹಾಗೂ ಗಾನ-ಕುಂಚ-ನ್ಯತ್ಯ ಸಮಾರಂಭ ನೆರವೇರಲಿದೆ. ಫೆ.24 ರಂದು ಸಂಜೆ 7 ಗಂಟೆಗೆ ಡಾ.ಸೀಮಾ ವಾರದ ಮತ್ತು ನಾಗರತ್ನ ಮನಗೂಳಿ ಅವರು ಮಹಿಳಾ ಜಾಗೃತಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಫೆ.25 ರಂದು ಶಿವಾನುಭವ ಮಂಟಪದ ನೂತನ ಪ್ರಾಂಗಣದ ಉದ್ಘಾಟನೆಯನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಅಂದು ಸಿಂದಗಿಯ ಆದರ್ಶ ಶಿಕ್ಷಕ ಎಚ್.ಟಿ.ಕುಲಕರ್ಣಿ ಗುರುಗಳಿಗೆ ಶಾಂತಸಿರಿ ಪ್ರಶಸ್ತಿ ಪ್ರದಾನ ನೆರವೇರಲಿದೆ.
ಫೆ.26 ರಂದು ಬೆಳಗ್ಗೆ 7 ಗಂಟೆಗೆ ಲಿಂ ಶಾಂತವೀರ ಪಟ್ಟಾಧ್ಯಕ್ಷರ ರಜತ ಮೂರ್ತಿಗೆ ರುದ್ರಾಭಿಷೇಕ ಹಾಗೂ ರಾಜೋಪಚಾರ ಪೂಜೆ ನಡೆಯಲಿದೆ. ಅಂದು ಸಂಜೆ 7 ಗಂಟೆಗೆ ಗದುಗಿನ ತೊಂಟದಾರ್ಯ ಮಠದ ಲಿಂ ಪೂಜ್ಯ ಜಗದ್ಗುರು ಡಾ. ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ಗುರು ಸ್ಮರಣೆಯು ಸೊನ್ನ ದಾಸೋಹ ವಿರಕ್ತಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿದೆ. ಫೆ.27 ರಂದು ಬೆಳಗ್ಗೆ 8 ಗಂಟೆಗೆ ಲಿಂ ಶಾಂತವೀರ ಪಟ್ಟಾಧ್ಯಕ್ಷರ ರಜತ ಮೂರ್ತಿಯ ಮೆರವಣಿಗೆ ಜರುಗಲಿದೆ. ಅಂದು ಸಂಜೆ 7 ಗಂಟೆಗೆ ನಾಡಿನ ಅನೇಕ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಮಹಾಮಂಗಲೋತ್ಸವ ಜರುಗಲಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 