ಮಹಲಿಂಗಪುರ

ಜಗತ್ತನ್ನು ಅರಿಯಲು ಇಂಗ್ಲೀಷ ಕಂಪ್ಯೂಟರ್ ಜ್ಞಾನ ಅಗತ್ಯ : ಮಗದುಮ್

ಜಗತ್ತನ್ನು ಅರಿಯಲು ಇಂಗ್ಲೀಷ ಕಂಪ್ಯೂಟರ್ ಜ್ಞಾನ ಅಗತ್ಯ : ಮಗದುಮ್

ಮಹಾಲಿಂಗಪುರ: ಇಂದಿನ ಸ್ಪರ್ಧಾತ್ಮಕ ಮತ್ತು ಅತ್ಯಾಧುನಿಕ ಸಮಾಜದಲ್ಲ್ಲಿ ಜಗತ್ತನ್ನು ಅರಿಯಲು ಇಂಗ್ಲೀಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನವು ಅವಶ್ಯಕವಾಗಿದೆ ಎಂದು ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ್ ಮ್ಯಾನೇಜರ್ ಪ್ರವೀಣ ಮಗದುಮ್ ಹೇಳಿದರು.

ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಪಾಲಕರ ಸಭೆ ಹಾಗೂ ಸ್ಕೀಲ್ ಇನ್ ವಿಲೇಜ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ದೇಶಪಾಂಡೆ ಪೌಂಡೇಶನ್ ವತಿಯಿಂದ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಪ್ರತಿಯೊಂದು ಊರಿನ ಕನ್ನಡ ಶಾಲೆಯ 5 ರಿಂದ 8 ತರಗತಿ ಮಕ್ಕಳಿಗೆ ವಿಶೇಷ ಇಂಗ್ಲೀಷ್ ಜ್ಞಾನ ಹಾಗೂ ಮಕ್ಕಳಿಗೆ ಕೌಶಲ್ಯಗಳ ಮೂಲಕ ಅವರ ಜ್ಞಾನಾಭಿವೃದ್ದಿಗೆ ಶ್ರಮಿಸುತ್ತಿದೆ.

ಇಂದು ಯಾವುದೇ ಸ್ನಾತಕೋತ್ತರ ಪದವಿಯನ್ನು ಪಡೆದರೂ ಸಹ ಉದ್ಯೋಗ ಪಡೆಯಲು ಮತ್ತು ಪ್ರಪಂಚದ ಜ್ಞಾನವನ್ನು ತಿಳಿಯಲು ಇಂಗ್ಲೀಷ ಭಾಷೆ ಮತ್ತು ಕಂಪ್ಯೂಟರ್ ಜ್ಞಾನವು ಅಗತ್ಯವಾಗಿ ಬೇಕು. ಅದಕ್ಕಾಗಿ ದೇಶಪಾಂಡೆ ಪೌಂಡೇಶನ್ ವತಿಯಿಂದ ವರ್ಷಕ್ಕೆ ಕೇವಲ 500 ರೂಗಳಲ್ಲಿ ಇಂಗ್ಲೀಷ್ ಮತ್ತು ಕಂಪ್ಯೂಟರ್ ಶಿಕ್ಷಣ ಹಾಗೂ ಸಂವಹನದ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಆಸಕ್ತ ಪಾಲಕರು ತಮ್ಮ ಮಕ್ಕಳ ಜ್ಞಾನ ವಿಕಾಸಕ್ಕಾಗಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಶಾಲೆಯ ಮುಖ್ಯಗುರುಮಾತೆ ಆರ್.ಎ.ಬನ್ನೂರ ಮಾತನಾಡಿ ದೇಶಪಾಂಡೆ ಪೌಂಡೇಶನದ ಶೈಕ್ಷನೀಕ ಸೇವಾಕಾರ್ಯ ಮತ್ತು ಮಕ್ಕಳ ಜ್ಞಾನಾಭಿವೃದ್ದಿಯಲ್ಲಿ ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿಗಳ ಕುರಿತು ಮಾತನಾಡಿದರು.

 ಕನರ್ಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಚಂದ್ರಶೇಖರ ಮೋರೆ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ-ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡಿ ಪ್ರಶಸ್ತಿಯು ನನ್ನ ಪತ್ರಿಕೋದ್ಯಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ಶಿಕ್ಷಕಿಯರಾದ ಜೆ.ಎಸ್.ಹಿರೇಮಠ, ಸಂಗೀತಾ ಕುಲಕಣರ್ಿ, ಆರ್.ಎಸ್.ರಾಠೋಡ, ಪೂಜಾ ಕಿಲ್ಲೇದಾರ, ಆರ್.ಬಿ.ಪಶ್ಛಾಪೂರ, ಎಸ್.ಎಂ.ಪತ್ತಾರ, ಸಿ.ಎಸ್.ಹಡಪದ, ಕೆ.ಎಂ.ಹುಣಗುಂದ. ಎಂ.ಎಸ್.ಉಮರಾಣಿ ಸೇರಿದಂತೆ ವಿದ್ಯಾಥರ್ಿಗಳು, ಪಾಲಕರು ಇದ್ದರು. 


ಸುದ್ದಿ ಓದಿ