ಎಲಬುರ್ಗ

ಹೊಸಳ್ಳಿಯಲ್ಲಿ ಶಿಕ್ಷಕರಿಗೆ ಇಂಗ್ಲೀಷ ಭಾಷೆಯ ತರಬೇತಿ ಕಾರ್ಯಾಗಾರ

ಹೊಸಳ್ಳಿಯಲ್ಲಿ ಶಿಕ್ಷಕರಿಗೆ ಇಂಗ್ಲೀಷ ಭಾಷೆಯ ತರಬೇತಿ ಕಾರ್ಯಾಗಾರ

ಯಲಬುರ್ಗಾ 15: ಶಿಕ್ಷಕರು ಮಕ್ಕಳಲ್ಲಿ ಭಾಷೆ ಕಲಿಯುವ ಬಗ್ಗೆ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು, ಶಿಕ್ಷಕರು ತಮ್ಮ ಜ್ಞಾನ ಮಕ್ಕಳಿಗೆ ಹಂಚಿದಷ್ಟು ನಿಮ್ಮ ಜ್ಞಾನ ಬೆಳೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೌನೇಶ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಆಂಗ್ಲ ಭಾಷೆಯ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ನಾವು ಯಾವುದೇ ಭಾಷೆಯನ್ನು ಬಳಸಿದರೆ ಮಾತ್ರ ಆ ಭಾಷೆ ಬೆಳೆಯಲು ಸಾಧ್ಯ.ಭಾಷೆಯ ಬಳಕೆ ಬಗ್ಗೆ ನಿರಂತರ ಅಭ್ಯಾಸ ಹಾಗೂ ಪ್ರಾವಿಣ್ಯತೆ ಇರಬೇಕಾಗುತ್ತದೆ.ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಯಾವುದೇ ಭಾಷೆ ಕಲಿಸುವುದರ ಮೊದಲು ತಮ್ಮ ಬೋಧಿಸುವ ಕೌಶಲ್ಯ ಪ್ರತಿ ದಿನ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶರಣಪ್ಪ ಕೊಪ್ಪದ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ಹಿ,ಧರಣಾ ಸೇರಿದಂತೆ ಮತ್ತಿತ್ತರು ಮಾತನಾಡಿದರು.ವಸತಿ ಶಾಲೆಯ ಪ್ರಾಚಾರ್ಯ ವ್ಹಿ.ಬಿ.ಹನಮಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ಶ್ಯಾಗೋಟಿ, ಶರಣಯ್ಯ ಸರಗಣಾಚಾರ, ಬಸವರಾಜ ಹವಳಿ, ಸುಮಂಗಲಾ ತೊಂಡಿಹಾಳ, ಬಸವರಾಜ ಮುಳಗುಂದ, ಶಿಲ್ಪಾ ಸಾತಪೂತ, ಸಂಗನಗೌಡ ಗೌಡರ, ಮೆಹಬೂಬ ಬಾದಶಹ, ವೀರಪ್ಪ ಗಾಣಿಗೇರ ಸೇರಿದಂತೆ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

ಸುದ್ದಿ ಓದಿ