ಯಲಬುರ್ಗಾ ಸಂಘದ ವತಿಯಿಂದ ಇಂಜಿನಿಯರ್ ದಿನಾಚರಣೆ
ಯಲಬುರ್ಗಾ 15: ದೇಶ ಕಂಡ ಅಪ್ರತಿಮ ಇಂಜಿನಿಯರ್, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಸ್ಮರಣಾರ್ಥ ಪಟ್ಟಣದ ಸರ್. ಎಂ.ವಿಶ್ವೇಶ್ವರಯ್ಯ ಎಲೆಕ್ಟ್ರಿಕಲ್ ಮತ್ತು ಪಬ್ಲಿಕ್ ವರ್ಕರ್ಸ್ ಯಲಬುರ್ಗಾ ಸಂಘದ ವತಿಯಿಂದ ಪಟ್ಟಣದಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರ ಮೆರವಣಿಗೆ ಮೂಲಕ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲಪ್ಪ ಭೂತೆ, ಉಪಾಧ್ಯಕ್ಷ ಸೋಮಶೇಖರ್ ಸಾದರಖಾನ್, ಕಾರ್ಯದರ್ಶಿ ಹುಸೇನಸಾಬ್ ಮಾನ್ವಿ, ಖಜಾಂಚಿ ಸಿದ್ದರಾಮೇಶ ಬೇಲೆರಿ, ಸಹಕಾರ್ಯದರ್ಶಿ ದೇವಪ್ಪ ಬನ್ನಿಕೊಪ್ಪ, ಹಾಗೂ ಸಂಘದ ಎಲ್ಲಾ ಸದಸ್ಯರು ಇದ್ದರು.