ಮಹಲಿಂಗಪುರ

ಹಂತಕರನ್ನ, ಅತ್ಯಾಚಾರಿಗಳನ್ನ ನಡುಬೀದಿಯಲ್ಲಿ ಎನ್ಕೌಂಟರ್ ಮಾಡಿ : ಗಾಯಕವಾಡ

ಹಂತಕರನ್ನ, ಅತ್ಯಾಚಾರಿಗಳನ್ನ ನಡುಬೀದಿಯಲ್ಲಿ ಎನ್ಕೌಂಟರ್ ಮಾಡಿ :  ಗಾಯಕವಾಡ

ಮಹಾಲಿಂಗಪುರ 25: ಉಗ್ರಗಾಮಿ ಸಂಘಟನೆಗಳ ಬ್ಯಾನ್ ಮತ್ತು ಹಿಂದೂ ಕಾರ್ಯಕರ್ತರ ಹಂತಕರನ್ನು ಎನ್ ಕೌಂಟರ್ ಮಾಡಿ ಹರ್ಷ ಹತ್ಯೆಗೆ ಹಾಗೂ ಲಕ್ಷ್ಮೀ ಕಳ್ಳಿಮನಿ ಮೇಲಿನ ಅತ್ಯಾಚಾರಕ್ಕೆ ನ್ಯಾಯ ಒದಗಿಸಬೇಕೆಂದು ಹಿಂದೂ ಮುಖಂಡ ನಂದು ಗಾಯಕವಾಡ ಸರ್ಕಾರವನ್ನು ಒತ್ತಾಯಿಸಿದರು. 

ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಸಂಜೆ ಸ್ಥಳೀಯ ಚೆನ್ನಮ್ಮ ವೃತ್ತದಲ್ಲಿ ಭಜರಂಗದಳದ ಯುವಕ ಹರ್ಷ ಮತ್ತು ಕುರಿಗಾಹಿ ಹೆಣ್ಣುಮಗಳು ಲಕ್ಶ್ಮಿ ಕಳ್ಳಿಮನಿ ಅತ್ಯಾಚಾರ ಖಂಡಿಸಿ ರಸ್ತೆ ತಡೆ ನಡೆಸಿ ಮಾತನಾಡಿದ ಅವರು ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿದ್ದರೂ ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳನ್ನು ತಡೆಯಲಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಪಿಎಫ್ ಐ, ಕೆ ಎಫ್ ಡಿ, ಎಸ್ಡಿಪಿಐ, ಸಿ ಎಫ್ ಐ ಮುಂತಾದ ಸಂಘಟನೆಗಳನ್ನು ಬ್ಯಾನ್ ಮಾಡಿ, ತಪ್ಪಿತಸ್ಥರನ್ನು ಎನ್ಕೌಂಟರ್ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. 

ಶ್ರೀರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾವಿ ಮಾತನಾಡಿ, ಇದುವರೆಗೆ 23 ಜನ ಹಿಂದೂಗಳ ಹತ್ಯೆಗಳು ನಡೆದರೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ಬಿಜೆಪಿ ಆಡಳಿತವನ್ನು ಖಂಡಿಸಿದರು. ಈ ಮುಂಚೆ ಜಗನ್ನಾಥ ಶೆಟ್ಟಿ ಆಯೋಗ ಜಾರಿಯಾಗಿದ್ದರೆ ಇಷ್ಟೊಂದು ಹಿಂದೂಗಳ ಹತ್ಯೆ ಮತ್ತು ಅತ್ಯಾಚಾರ ನಡೆಯುತ್ತಿರಲಿಲ್ಲ ಕೂಡಲೇ ಆಯೋಗ ಜಾರಿ ಮಾಡಿ ಯಾಸಿನ್ ಭಟ್ಕಳ, ರಿಯಾಜ್ ಭಟ್ಕಳ್ ಮುಂತಾದ ದ್ರೋಹಿಗಳನ್ನು ನಿರ್ಮೂಲನೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. 

 ಗಣೇಶ ದೇವಸ್ಥಾನದಿಂದ ಹರ್ಷ ಹಿಂದೂ ಅಮರ ರಹೇ, ಭಾರತ್ ಮಾತಾ ಕಿ ಜೈ, ಘೋಷಣೆಗಳನ್ನು ಕೂಗುತ್ತಾ ಚೆನ್ನಮ್ಮ ವೃತ್ತದಲ್ಲಿ ಮೇಣ ಬತ್ತಿ ಬೆಳಗಿಸಿ, ಶ್ರದ್ಧಾಂಜಲಿ ಅರ​‍್ಿಸಿದರು. 

ಶಿವಾನಂದ ನೇಗಿನಾಳ ಮಾತನಾಡಿದರು.ಸಂಘಟನೆ ಮುಖಂಡರಾದ ರವಿ ಜವಳಗಿ, ಮಹಾಲಿಂಗಪ್ಪ ಕೊಳ್ಳೊಳಿ, ಸಂಜು ಬಾರಕೊಲ,ಚನ್ನಪ್ಪ ರಾಮೋಜಿ, ಪ್ರವೀಣ ಕಟ್ಟಿ,ಶಿವನಗೌಡ ಪಾಟೀಲ,ಮಹಾಲಿಂಗ ನರಗಟ್ಟಿ,ವಿಜಯ ಸಬಕಾಳೆ, ಪ್ರಭು ನಾವಿ,ವಿನಾಯಕ ಗುಂಜಿಗಾವಿ,ಶೇಖರ ಮಗದುಮ,ಭೈರೇಶ ಆದೆಪ್ಪನವರ,ಅಭಿ ಲಮಾಣಿ, ಚೇತನ ಬಂಡಿ,ಅನಿಲ ಕಿರಿಕಿರಿ,ಬಸು ಮನ್ಮಿ,ನಾಗರಾಜ ಭಜಂತ್ರಿ, ನಂದು ಲಾತೂರ್,ಭರತ ಕದ್ದಿಮನಿ ,ಮಹಾಂತೇಶ ಹಳ್ಳಿ,ಮಂಜು ಭಾವಿಕಟ್ಟಿ,ಮಂಜು ಸಿಂಪಿ,ದತ್ತ ಯರಗಟ್ಟಿಕರ, ಶಿವು ಹುಣಶ್ಯಾಳ,ಚೇತನ ಬಂಡಿವಡ್ಡರ,ಅರ್ಜುನ ಪವಾರ, ಆನಂದ ಪವಾರ್, ಬಸವರಾಜ ಗಿರಿಸಾಗಾರ,ಮಹಾಲಿಂಗ ಪಂಚಕಟ್ಟಿಮಠ, ಶಿವು ನೆಗಿನಾಳ, ಅಭಿಷೇಕ ಹಾಸಿಲಕರ,ಕುಮಾರ ನಾರಾಯಣಕರ, ಕೃಷ್ಣ ಕಳ್ಳಿಮನಿ, ಯಲ್ಲಪ್ಪ ಬನ್ನೆನ್ನವರ,ಬಸು ಮಡಿವಾಳ,ಕುಮಾರ ಪುಜಾರಿ,ಸುವರ್ಣಾ ಆಸಂಗಿ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. 


ಸುದ್ದಿ ಓದಿ