ಗ್ರಾಮಗಳ ಸುಧಾರಣೆಗೆ ಪಾಧಾನ್ಯತೆ: ಈರಣ್ಣಾ ಕಡಾಡಿ
ರಾಮದುರ್ಗ ನವೆಂಬರ್ 03: ಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂದು ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗ್ರಾಮಗಳ ಕೂಡು ರಸ್ತೆಗಳ ಸುಧಾರಣೆಗೆ ಪಾಧಾನ್ಯತೆ ನೀಡಿ ರೈತರ ಧವಸ ಧಾನ್ಯಗಳನ್ನು ಸಾಗಿಸಲು ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ತಾಲೂಕಿನ ಘಟಕನೂರದಲ್ಲಿ ಹೊಸೂರ ರಸ್ತೆಯಿಂದಾ ರಾಜ್ಯ ಹೆದ್ದಾರಿವರೆಗೆ ವ್ಹಾಯಾ ಕೊಳಚಿ ಘಟಕನೂರ ರಸ್ತೆ ಸುಧಾರಣೆಗೆ ರೂ. 5,41 ಕೋಟಿ, ಕಟಕೋಳ ಎಮ್ ಚಂದರಗಿ ರಸ್ತೆ ಸುಧಾರಣೆಗೆ ರೂ. 5.6 ಕೋಟಿ, ಪಂಚಗಾವದಿಂದಾ ಬೂದನೂರ ರಸ್ತೆ ಸುಧಾರಣೆಗೆ 9.28 ಕೋಟಿ, ಬಿಜಗುಪ್ಪಿ ಗ್ರಾಮದಲ್ಲಿ ಸಿಸಿ ಮತ್ತು ಚರಂಡಿ ನಿಮರ್ಾಣಕ್ಕೆ ರೂ. 20 ಲಕ್ಷ ಹಾಗೂ ಚಿಪ್ಪಲಕಟ್ಟಿಯಿಂದಾ ತೊಂಡಿಕಟ್ಟಿ ರಸೆ ಸುಧಾರಣೆಗೆ ರೂ. 5.27 ಕೋಟಿ ಕಾಮಗಾರಿಗಳಿಗೆ ಶಾಸಕ ಮಹಾದೇವಪ್ಪ ಯಾದವಾಡರೊಂದಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಅವರು ರೈತರು ರಾಜ್ಯ ಕೇಂದ್ರ ಸರಕಾರಗಳು ರೂಪಿಸಿದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಉಬಯ ಸರಕಾರಗಳು ಜಂಟಿಯಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಅಡಿಯಲ್ಲಿ ತಾಲೂಕಿನ ಗ್ರಾಮಗಳ ಕೂಡು ರಸ್ತೆಗಳ ಅಭಿವೃದ್ದಿಗೆ ರೂ.27 ಕೋಟಿ ಹಣ ಮಂಜೂರ ಮಾಡಿಸುವಲ್ಲಿ ಕೇಂದ್ರದ ಮಾಜಿ ಸಚಿವ ದಿ. ಸುರೇಶ ಅಂಗಡಿ ಅವರ ಶ್ರಮವು ಇದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ದಿ. ಸುರೇಶ ಅಂಗಡಿಯವರನ್ನು ನೆನೆದು ಅಂಗಡಿಯವರ ಕಾರ್ಯ ನಿಜಕೂ ಶ್ಲಾಘನೀಯವಾದುದು ಎಂದು ಬಣ್ಣಿಸಿದರು.
ಇದು ರೈತರಿಗಾಗಿ ರೂಪಿಸಿದ ಯೋಜನೆಯಾಗಿದ್ದು ರಸ್ತೆ ಅಗಲಿಕರಣ ಸಂದರ್ಭದಲ್ಲಿ ರೈತ ಸಮುದಾಯದ ಸಹಕಾರಿ ಬಹಳ ಅಗತ್ಯವಾದುದು ಆ ದಿಶೆಯಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯರಾದ ಮಾರುತಿ ತುಪ್ಪದ, ರಮೇಶ ದೇಶಪಾಂಡೆ, ಮಾಜಿ ಜಿಪಂ ಸದಸ್ಯ ಮಾರುತಿ ಕೊಪ್ಪದ, ಡಿಸಿಸಿ ಬ್ಯಾಂಕ್ ನಿದರ್ೇಶಕ ಡವನ, ಪಿಎಮ್ಜಿಎಸಆರ್ ವಾಯ್ ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಎಸ್ ಎಸ್ ಸೊಬರದ, ಸಹಾಯಕ ಅಭಿಯಂತರಾದ ಡಿ ಜಿ ಜುಗಟಿ, ಮಹಾದೇವ ಅಲೊಲ್ಲಗಿ ಹಾಗೂ ಗ್ರಾಮಸ್ಥರು ಹಾಜರಿದ್ದರು.