ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಒತ್ತು: ಡಾ. ಶೈಲೇಂದ್ರ ಬೆಲ್ದಾಳೆ
ಬೀದರ್ 05: ದಕ್ಷಿಣ ಕ್ಷೇತ್ರದಲ್ಲಿ ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಮೂಲಭೂತ ಸೌಕರ್ಯಗಳಾದ ರಸ್ತೆ, ಸಮುದಾಯ ಭವನ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.ಅವರು ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾ ವಾಡಿ ಗ್ರಾಮದ ಭವಾನಿ ಮಾತಾ ದೇವಸ್ಥಾನದ ಬಳಿ, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ರೂ. 20 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಸ್ಥರ ಬೇಡಿಕೆಗಳನ್ನು ಮನಗಂಡು ಸಾರ್ವಜನಿಕ ಉಪಯೋಗಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ಹಾಗೂ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಕ್ಷೇತ್ರದ ಅಭಿವೃದ್ಧಿಯೇ ತಮ್ಮ ಪ್ರಮುಖ ಗುರಿಯಾಗಿದ್ದು, ಜನಹಿತಕ್ಕೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
“ಜನ ಸೇವೆಯೇ ನನ್ನ ಆಧ್ಯ ಕರ್ತವ್ಯ” ಎಂಬ ಧ್ಯೇಯದೊಂದಿಗೆ ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದರು. ಜನರ ವಿಶ್ವಾಸವೇ ತಮ್ಮ ಶಕ್ತಿ, ಜನರ ಆಶಯಗಳನ್ನು ಕಾರ್ಯರೂಪಕ್ಕೆ ತರುವುದೇ ತಮ್ಮ ಜೀವನದ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರಲು ಸಮಗ್ರ ಹಾಗೂ ಸಮತೋಲನದ ಅಭಿವೃದ್ಧಿಯೇ ಮುಖ್ಯ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ನಿರಂತರ ಪ್ರಗತಿಯೇ ಸಮೃದ್ಧ ಸಮಾಜದ ದಾರಿ.ನುಡಿದಂತೆ ನಡೆದು, ಭರವಸೆಯೊಂದಿಗೆ ಕೆಲಸ ಮಾಡುವುದೇ ನಿಜವಾದ ನಾಯಕತ್ವ.ಅಭಿವೃದ್ಧಿಯೇ ನಮ್ಮ ದೃಢ ಸಂಕಲ್ಪ ಹಿ ಅದುವೇ ನನ್ನ ಮೂಲ ಮಂತ್ರ ಎಂದು ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರುನಾಥ ರಾಜಗೀರ, ಉದಯಕುಮಾರ ತೋರಣ, ಜೋಸೆಫ್ ಕೊಡ್ಡೆಕರ್, ಶಾಮರಾವ ಮಲ್ಕಾಪುರ, ಪವನ ಪಾಟೀಲ, ಶಿವಕುಮಾರ ಹೇಡೆ, ಆನಂದ ಪಾಟೀಲ, ರಮೇಶ ಬಿರಾದಾರ,ಘಾಳೆಪ್ಪ ಕಮಠಾಣೆ, ವಿದ್ಯಾಸಾಗರ, ಶಿವಕುಮಾರ, ಶಾಂತಕುಮಾರ, ನಾರಾಯಣ ಬರಿದಾಬಾದ್, ಶ್ರೀಕಾಂತ, ನಾರಾಯಣ ರೆಡ್ಡಿ, ಮಾಣಿಕ, ರಾಜಕುಮಾರ ಮುಡಗಿ, ದಸರಥ ಮೋರ್ಗಿ, ಮಲ್ಲಿಕಾರ್ಜುನ,ಮಹೇಶ ತೋರಣ, ಚಂದ್ರಕಾಂತ, ಶರಣ್ಯ, ಮಹೇಶ್, ಮಚೇಂದ್ರ, ಸಂಜೀವ, ಶಿವಕಾಂತ, ಶಿವಮೂರ್ತಿ, ರಮೇಶ, ಶಿವಾನಂದ, ಸಂತೋಷ ಬಂಡೆಪ್ಪ, ಮತ್ತಿತರರು ಉಪಸ್ಥಿತರಿದ್ದರು..