ಅಪಾರ ಜನ ಬೆಂಬಲದೊಂದಿಗೆ ಹುಲಗೂರಿನಿಂದ ಸವಣೂರವರಗೆ ಸಾಗಿದ ಏಕತಾ ನಡಿಗೆ
ಶಿಗ್ಗಾವಿ 11: ದೇಶದ ಏಕತೆಗಾಗಿ, ದೇಶದ ಒಳಿತಿಗಾಗಿ ಕೈ ಜೋಡಿಸಿ ಎಂಬ ಕೂಗಿನೊಂದಿಗೆ ಶಿಗ್ಗಾವಿ ತಾಲ್ಲೂಕಿನ ಹುಲಗೂರು ಗ್ರಾಮದಿಂದ ಶಿಗ್ಗಾವ-ಸವಣೂರ ಯುವ ಕಾಂಗ್ರೇಸ್ ಹಾಗೂ ಮಾಜಿ ಶಾಸಕ ಸೈಯದ ಅಜೀಪೀರ ಖಾದ್ರಿಯವರ ನೇತ್ರತ್ವದಲ್ಲಿ ಅಪಾರ ಜನ ಬೆಂಬಲದೊಂದಿಗೆ ಜನ ಜಾಗೃತಿ ಪಾದಯಾತ್ರೆ ಜರುಗಿತು.
ಮಾದಾಪೂರ, ಕಾರಡಗಿ, ಚಿಲ್ಲೂರಬಡ್ನಿ, ಮಾರ್ಗವಾಗಿ ಸವಣೂರಿಗೆ ಹೊರಟ ನಡಿಗೆ ಸಾಗಿದಂತೆಲ್ಲಾ ಅಪಾರ ಜನ ಬೆಂಬಲ ಮತ್ತು ಅದ್ದೂರಿ ಸ್ವಾಗತ ಪಡೆಯಿತು.
ಹುಲಗೂರಿನ ಸರ್ಕಾರಿ ಶಾಲೆಗಳಿಗೆ 75 ಗಿಡಗಳನ್ನು 75ನೇ ಸ್ವಾತಂತ್ರ್ಯದ ದ್ಯೋತಕವಾಗಿ ನೆಡಲಾಯಿತು. ಅತ್ಯಂತ ಉತ್ಸಾಹದಿಂದ ಸಾಗಿಬಂದ ಮೆರವಣಿಗೆ ಸವಣೂರಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರೆ್ಣ ಮಾಡುವ ಮೂಲಕ ಸಮಾರೋಪವಾಯಿತು.
ಮಾಜಿ ಶಾಸಕ ಸೈಯದ್ ಅಜ್ಜಂಪೀರ ಖಾದ್ರಿ, ಮುಖಂಡರಾದ ಡಾ ಫಕ್ಕೀರಗೌಡ ಪಾಟೀಲ್, ಪ್ರೇಮಾ ಪಾಟೀಲ್, ಎಸ್ ವಿ ಪಾಟೀಲ, ಬಸವರಾಜ ಸಾಲಿ, ಹನುಮಂತಪ್ಪ ಬಂಡಿವಡ್ಡರ, ಮಂಜುನಾಥ್ ತಿಮ್ಮಾಪುರ, ಶಬ್ಬೀರ ಮಕಾಂದಾರ, ಮಲ್ಲಿಕಾರ್ಜುನಗೌಡಾ ಪಾಟೀಲ, ಯಲ್ಲಪ್ಪಾ ತಳವಾರ, ತಮೀದ ಖಾಜಿ, ಅಣ್ಣಪ್ಪ ಲಮಾಣಿ, ವಸಂತಾ ಬಾಗೂರ, ಶರಣಪ್ಪ ಕಿವಡನವರ, ಸಲೀಂ ಫಾರೋಕಿ, ಶಂಬು ನೆರ್ತಿ, ಸುಮಿತ ಸೂರ್ಯವಂಶಿ, ಮಹಾಂತೇಶ ಸಾಲಿ, ಅಣ್ಣಪ್ಪ ನಡಟ್ಟಿ, ಜಾಪರ್ ಬಗವಾನ, ಸೇರಿದಂತೆ ಶಿಗ್ಗಾವಿ- ಸವಣೂರ ಯುವ ಕಾಂಗ್ರೆಸ್ ಪದಾಧಿಕಾರಿಗಳು ತಾಲ್ಲೂಕಿನ ನೂರಾರು ನೂರಾರು ಕಾರ್ಯಕರ್ತರು ಹಾಜರಿದ್ದರು.