ನಿರಾಶ್ರತರಿಗೆ ಮೂಲ ಸೌಲಭ್ಯ ಒದಗಿಸಲು ಪಾಮಾಣಿಕ ಪ್ರಯತ್ನ: ಶಾಸಕ ಯಾದವಾಡ
ರಾಮದುರ್ಗ 30: ಮಲಪ್ರಭಾ ಪ್ರವಾಹದ ನಿರಾಶ್ರತರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಬೇಕಾದ ಅನುಧಾನ ಮಂಜೂರ ಮಾಡಿ, ಅವರ ಬಾಳಿನಲ್ಲಿ ಮತ್ತೆ ಬೆಳಕು ಚೆಲ್ಲುವಂತೆ ಮಾಡಲು ಪಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದರು.
ತಾಲೂಕಿನ ಶಿವರಾಜಪೂರದ ಹಿರಿಯ ಪ್ರಾಥಮಿಕ ಶಾಲೆಯ 1 ಕೊಠಡಿ ನಿರ್ಮಾಣಕ್ಕೆ ರೂ.11 ಲಕ್ಷ, ಹಂಪಿಹೊಳಿ ಶಿಪ್ಟಂಗ್ದ ಎಸ್ ಟಿ ಕಾಲೋನಿ ಕೂಡು ರಸ್ತೆ ಅಭಿವೃದ್ದಿಗೆ ರೂ, 100 ಲಕ್ಷ, ಹಂಪಿಹೋಳಿ ಪ್ರಾಥಮಿಕ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ರೂ. 24 ಲಕ್ಷ, ಸುರೇಬಾನದ ಹಿರಿಯ ಪ್ರಾಥಮಿಕ ಶಾಲೆಯ 8 ಕೊಠಡಿಗಳ ನಿರ್ಮಾಣಕ್ಕೆ ರೂ.96 ಲಕ್ಷ ರೇವಡಿಕೊಪ್ಪ ಶಾಲೆಯ 3 ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ರೂ. 36 ಲಕ್ಷ ಹಾಗೂ ಗೊಣ್ಣಾಗರದ ಜಲ ಜೀವನ ಯೋಜನೆಯಡಿ 316 ಮನೆಗಳಿಗೆ ನಳ ಜೋಡಿಣೆಗೆ ರೂ. 47 . 40 ಲಕ್ಷ ಕಾಮಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸರಕಾರದಂದಾ ಅನುಧಾನ ತರಲು ಸಾಕಷ್ಟು ಶ್ರಮವಹಿಸಲಾಗಿದೆ ಕಾರಣ ಗ್ರಾಮಸ್ಥರು ರಸ್ತೆ ಹಾಗೂ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಜಾಗರೂಕತೆಯಿಂದಾ ಗುಣಾತ್ಮಕ ಕೆಲಸ ಮಾಡಿಸಿಕೊಳ್ಳುಲು ಸಲಹೆ ನೀಡಿದರು.
ಗುತ್ತಿಗೆದಾರರು ಕಳಪೆ ಕಾಮಗಾರಿ ಎಂದು ಮೇಲ್ನೂಟಕ್ಕೆ ಕಂಡು ಬಂದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತ ಸದಸ್ಯ ಶಿವಕ್ಕಾ ಬೆಳವಡಿ, ಸಹಕಾರಿ ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ, ಗಿರಿಯಪ್ಪ ಹಣಸಿ, ಜಿಲ್ಲಾ ಪಂಚಾಯತ ಸಹಾಯಕ ಅಭಿಯಂತರ ಎಂ ಐ ಕೊಳ್ಳಿ, ಸಹಾಯಕ ಅಭಿಯಂತರ ಬಸವರಾಹ ಕರ್ಕಿ, ಗಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ಶ್ರೀನಿವಾಸ ವಿಶ್ವಕರ್ಮ. ಲೊಕೊಪಯೋಗಿ ಇಲಾಖೆ ಬಿ ಎನ್ ದಳವಾಯಿ. ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.