ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಬೆಳಗಾವಿ : ಸುಪ್ರೀಂ ಕೋರ್ಟನಲ್ಲಿ ಬಾಕಿ ಇರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳನ್ನು ಸುಪ್ರೀಂನ ನಿರ್ದೇಶನದಂತೆ “ಸಮಾಧಾನ ಸಮಾರೋಹ ಅಭಿಯಾನ” ದಡಿಯಲ್ಲಿ ರಾಜಿ ಮೂಲಕ ಇತೇರ್ಥಕ್ಕೆ ಪ್ರಯತ್ನ ಮಾಡಲಾಗುವದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯ ನ್ಯಾಯಾಲಯದ ತಮ್ಮ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಅಗಷ್ಟ 21, 22, 23ರಂದು ಮೂರು ದಿನಗಳ ವರೆಗೆ ಸುಪ್ರೀ ಕೋರ್ಟ್ನಲ್ಲಿನ ಬೆಳಗಾವಿ ಜಿಲ್ಲೆಯ ಪ್ರಕರಣಗಳನ್ನು ಇತೇರ್ಥಕ್ಕೆ ಈ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 350ರಷ್ಟು ಪ್ರಕರಣಗಳು ಬಾಕಿ ಇವೆ. ಈಗಾಗಲೆ ಜಿಲ್ಲೆಗೆ ಸಂಬAಧಿಸಿದAತೆ ಈ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು, ಈ ಪ್ರಕರಣಗಳಲ್ಲಿರುವ ಕಕ್ಷಿದಾರರಿಗೆ ನೋಟಿಸನ್ನು ನೀಡಲಾಗಿದೆ ಎಂದರು.
ಸುಪ್ರೀA ಕೋರ್ಟ್ನಲ್ಲಿರುವ ಭೂಸ್ವಾಧೀನ, ನೀರಾವರಿ, ಹೆದ್ದಾರಿ ಹಾಗೂ ವಾಹನ ಪರಿಹಾರ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇದು ಅವಕಾಶ ಎಂದಿದ್ದಾರೆ. ಅದೇ ರೀತಿ ಅಲ್ಲಿ ಹಾಜರಾದ ಕಕ್ಷಿದಾರರಿಗೆ ರಾಜಿ ಸಂಧಾನ ಮಾಡುವ ಮೂಲಕ ಪ್ರಕರಣ ಇತೇರ್ಥಕ್ಕೆ ಪ್ರಯತ್ನ ಮಾಡಲಾಗುವದು ಎಂದು ತಿಳಿಸಿದರು. ಒಂದು ವೇಳೆ ಸುಪ್ರೀ ಕೋರ್ಟ್ ನಲ್ಲಿರುವ ಪ್ರಕರಣಗಳ ಕಕ್ಷಿದಾರರಿಗೆ ನೋಟಿಸು ಮುಟ್ಟದೆ ಇದ್ದಲ್ಲಿ ಬೆಳಗಾವಿಯಲ್ಲಿಯೇ ಸುಪ್ರೀಂನ ಪ್ರಕರಣ ಗಳನ್ನು ಇಲ್ಲಿಯೇ ರಾಜಿ ಮಾಡಲಿಕ್ಕೆ ಇದೊಂದು ಸುವರ್ಣ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಕಕ್ಷಿದಾರರು ಸದ್ಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಈ ವರ್ಷದ ಈ ವರ್ಷದ 2ನೇ ಲೋಕ ಅದಾಲತ ಜುಲೈ ತಿಂಗಳ 11ರಂದು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಪೂರ್ವ ತಯಾರಿ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 1 ಲಕ್ಷ 60 ಸಾವಿರ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿವೆ, ಅವುಗಳ ಪೈಕಿ 25 ಸಾವಿರ ಪ್ರಕರಣಗಳನ್ನು ರಾಜಿ ಮಾಡಬಹುದು ಎಂದು ಗುರುತಿಸಲ್ಪಟ್ಟಿವೆ ಎಂದು ನುಡಿದರು. ಆ ಪ್ರಕರಣಗಳಲ್ಲಿ ಪಕ್ಷಿಗಾರರಿಗೆ ನೋಟಿಸÀನ್ನು ನೀಡಿ ನ್ಯಾಯಾಲಯಕ್ಕೆ ಕರೆದು ಪ್ರತಿದಿನ ಮಾತುಕತೆ ಮಾಡಲಾಗುತ್ತಿದೆ ಎಂದರು. ಬೆಳಗಾವಿ ಹಾಗೂ ಜಿಲ್ಲೆಯ ಕಕ್ಷಿದಾರರು ಹಾಜರಾಗಿ ರಾಜಿ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದರು.
ಅದೇ ರೀತಿಯಾಗಿ ಪೊಲೀಸ್ ಇಲಾಖೆಯ ದತ್ತಾಂಶದ ಪ್ರಕಾರ ಜಿಲ್ಲೆಯಲ್ಲಿ ಸದ್ಯ 10 ಲಕ್ಷದ 54 ಸಾವಿರ ಸಂಚಾರ ನಿಯಮ ಉಲ್ಲಂಘನೆ (ಟ್ರಾಫಿಕ್ ಚಲನ್) ಪ್ರಕರಣಗಳು ಬಾಕಿ ಇವೆ. ಲೋಕ ಅದಾಲತ್‌ನಲ್ಲಿ ಈ ಚಲನ್‌ಗಳ ದಂಡದ ಮೊತ್ತದಲ್ಲಿ ಶೇಕಡಾ 50ರಷ್ಟು ರಿಯಾಯಿತಿಗೆ ಅವಕಾಶವಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬಹುದು ಎಂದರು.
ಜಿಲ್ಲೆಯಲ್ಲಿ ಸದ್ಯ 27 ಸಾವಿರ ಚೆಕ್ ಬೌನ್ಸ್ ಪ್ರಕರಣಗಳು ಬಾಕಿ ಇದ್ದು, ಇವುಗಳ ಶೀಘ್ರ ಇತ್ಯರ್ಥಕ್ಕಾಗಿ ಜುಲೈ 18ರಂದು ವಿಶೇಷವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರಿಗೆ ಸುವರ್ಣ ಅವಕಾಶ ನೀಡಲಾಗುವುದು. ಕೋರ್ಟ್ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಸುದೀರ್ಘ ಕಾಲದ ವಿವಾದಗಳನ್ನು ಪರಸ್ಪರ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ್ ನಾಯಕ ಅವರು ತಿಳಿಸಿದರು.
ಇಂದಿನ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ್ ಉಪಸ್ಥಿತರಿದ್ದರು.