ರಾಮದುರ್ಗ

ಶಾಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನ: ಯಾದವಾಡ

ಶಾಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನ: ಯಾದವಾಡ

ರಾಮದುರ್ಗ 23: ದಶಕಗಳಿಂದಾ ತಾಲೂಕಿನ ಅಂಜುಮನ ಉರ್ದು ಶಾಲೆಗೆ ಅನುದಾನ ಹಾಗೂ ಶಿಕ್ಷಕರ ಸಂಬಳ ಇಲ್ಲದೆ ಆರ್ಥಿಕವಾಗಿ ತೊಂದರೆಯಲ್ಲ್ಲಿದ್ದಾಗ ಅನುದಾನಕ್ಕೊಳಪಡಿಸಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ರಾಜಕೀಯ ಮಾಡಿಲ್ಲಾ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ತಾಲೂಕಿನ ಹಳೇತೊರಗಲ್‍ದ ಉರ್ದು ಶಾಲೆ ಹೆಚ್ಚುವರಿ ಕಟ್ಟಡ ಹಾಗೂ ಕೊಠಡಿಗಳ ನವೀಕರಣ ಕಾಮಗಾರಿ ಹಾಗೂ ಹಿರಿಯರ ಪ್ರಾಥಮಿಕ ಶಾಲೆ 2 ನೂತನ ಶಾಲಾ ಕೊಠಡಿಗಳು, ಮಾಗನೂರ ಪ್ಲಾಟದ 1 ನೂತನ ಶಾಲಾ ಕೊಠಡಿ ಹಾಗೂ 2 ಹೊಸ ಶಾಲಾ  ಹೆಚ್ಚುವರಿ  ಕಟ್ಟಡಗಳು, ಮಲ್ಲಾಪೂರದಲ್ಲಿ 2 ನೂತನ ಕೊಠಡಿಗಳ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿ ತಾಲೂಕಿನ ಮಕ್ಕಳಿಗೆ ಶಿಕ್ಷಣದ ಸೌಲಭ್ಯಗಳು ದೊರೆಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದನೆ ಎಂದು ಹರ್ಷ ವ್ಯಕ್ತಪಡಿಸಿದರು. 

ಮಲಪ್ರಭಾ ಪ್ರವಾಹದಿಂದ ನಾಶವಾದ ಶಾಲಾ ಕಟ್ಟಡಗಳನ್ನು ದುರಸ್ಥಿಮಾಡಿ ಹಾಗೂ ನೂತನ ಕಟ್ಟಡಗಳನ್ನು ನಿರ್ಮಿಸಿ ಶೈಕ್ಷಣಿಕ ಪ್ರಗತಿಗೆ ಬಹಳ ಮುತುವರ್ಜಿ ವಹಿಸಿದ ಶಾಸಕರ ಕಾರ್ಯ ಶ್ಲಾಘನೀಯವಾದುದು ಎಂದು ಬಣ್ಣಿಸಿದರು. ನಮಗೆ ಇಂತಹ ಕೆಲಸ ಬೇಕು ಎಂದು ಮನವಿ ಮಾಡಿದಾಗಿ ಶೀಘ್ರದಲ್ಲಿಯೆ ಸ್ಪಂದಿಸುತ್ತಿರವುದು ನಮಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಸ್ಫೂರ್ತಿಯಾಗಿದೆ, ಅಲ್ಲದೆ ಅದಕ್ಕೆ ಪ್ರತಿಯಾಗಿ ನಮ್ಮ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸೋಣ ಎಂದು ಹೇಳಿದರು. 

ಜಿಲ್ಲಾ ಪಂಚಾಯತ ಸದಸ್ಯ ಜಹೂರ ಹಾಜಿ, ಮಾಜಿ ಜಿಪಂ ಸದಸ್ಯ ದಾವಲಬಾಯಿ ಜಿಲ್ಲಾ ಪಂಚಾಯತ ಸಹಾಯಕ ಅಭಿಯಂತರ ಎಮ್ ಈ ಕೊಳ್ಳಿ, ಸಹಾಯಕ ಅಭಿಯಂತರ ಬಿ ಈ ಕರ್ಕಿ, ಲೊಕೊಪಯೋಗಿ ಇಲಾಖೆ ಸಹಾಯಕ ಅಭಿಯಂತರ ರವಿಕುಮಾರ, ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಸುದ್ದಿ ಓದಿ