ಎಲಬುರ್ಗ

ಪ್ರತಿಯೊಬ್ಬ ಬಡ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಪಪಂ ಅಧ್ಯಕ್ಷ ಅಮರೇಶ

ಪ್ರತಿಯೊಬ್ಬ ಬಡ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಪಪಂ ಅಧ್ಯಕ್ಷ ಅಮರೇಶ

ಯಲಬುರ್ಗಾ 17: ಸಮಾಜದಲ್ಲಿನ ಪ್ರತಿಯೊಬ್ಬ ಬಡ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಬಗ್ಗೆ ಕೀಳರಿಮೆ ದೂರ ಮಾಡಿದ್ದಾರೆ ಎಂದು ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.

ಬುಧವಾರ ಪಟ್ಟಣದ 9ನೇ ವಾರ್ಡಿನ ವಿಜಯ ಕಲಾ ಭವನದ ಹತ್ತಿರ ಇರುವ 13ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯ ಸಹೋಗದಲ್ಲಿ ವ್ಯಾಪ್ತಿಯ 5 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ವಿತರಿಸಿ ಮಾತನಾಡಿದರು. ‘ಹೆಣ್ಣಿಗೆ ಸಮಾಜದಲ್ಲಿ ಸ್ಥಾನಮಾನ ಸಿಗಬೇಕು. ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು ಎಂಬ ಸುದ್ದೇಶದಿಂದ ಸರ್ಕಾರವು ‘ಭಾಗ್ಯಲಕ್ಷ್ಮಿ’ ಬಾಂಡ್ ಮೊದಲಾದ ಯೋಜನೆ ಜಾರಿಗೊಳಿಸಿದೆ’ ಎಂದು ಹೇಳಿದರು.

ನಂತರ ಮಾತನಾಡಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ  ಲಲಿತಾ ನಾಯಕ ಮಾತನಾಡಿ, ‘ಹೆಣ್ಣು ಮಕ್ಕಳ ಭವಿμÀ್ಯತ್ತಿಗೆ ಉಪಯೋಗಕರವಾದ ಸರಕಾರದ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಬಾಂಡ್‍ನ ಉಪಯೋಗ ಪಡೆಯುವ ಹೆಣ್ಣುಮಕ್ಕಳಿಗೆ 18 ವμರ್À ತುಂಬುವವರೆಗೆ ವಿವಾಹ ಮಾಡುವಂತಿಲ್ಲ. ಕುಟುಂಬದಲ್ಲಿ ಎರಡಕ್ಕಿಂತ ಜಾಸ್ತಿ ಮಕ್ಕಳಿರುವಂತಿಲ್ಲ. ಅಲ್ಲದೇ ಯೋಜನೆಯ ಲಾಭ ಪಡೆಯಬೇಕಾದರೇ ಮಗು ಕಡ್ಡಾಯವಾಗಿ 8ನೇ ತರಗತಿ ಓದರಿರಲೇಬೇಕು. ಎಂದು ಬಾಂಡ್‍ನ ಫಲಾನುಭವಿಗಳಿಗೆ ಸಲಹೆ ಮಾಡಿದರು. ಮುಖಂಡ ದೊಡ್ಡಯ್ಯ ಗುರುವಿನ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಅಶೋಕ ಅರಕೇರಿ, ಮುಖಂಡ ಸುರೇಶ ಮಾಟೂರ್, ಅಂಗನವಾಡಿ ಶಿಕ್ಷಕಿ ಪ್ರೇಮಾ ಹುಬ್ಬಳ್ಳಿ, ಗವಿಸಿದ್ದಮ್ಮ ಕೊಡಗಲಿ, ಗೌರಮ್ಮ ಬೆಲೇರಿ, ಸಾವಿತ್ರಿ ಅಂಬಲಿ, ಸಹಾಯಕಿ ಗಿರಿಜಮ್ಮ ಬೆಟಗೇರಿ, ದೇವಮ್ಮ, ಅರುಂಧತಿ ಅರಕೇರಿ, ಹಾಗೂ ಮತ್ತಿತರರು ಇದ್ದರು.

ಸುದ್ದಿ ಓದಿ