ಇಂಡೋನೇಷಿಯಾದ ಕರಾವಳಿಯಲ್ಲಿ ಭೂಕಂಪನ
ಮಾಸ್ಕೋ, ಆಗಸ್ಟ್ 3 ಇಂಡೋನೇಷ್ಯಾದ ಕರಾವಳಿಯಲ್ಲಿ ಭೂಕಂಪನ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.1 ಎಂದು ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಸ್ಎಂಸಿ) ತಿಳಿಸಿದೆ.
ಭೂಕಂಪನ ಕೇಂದ್ರ ಬಿಂದು ಸುಮಾತ್ರಾ ದ್ವೀಪದ ಬೆಂಗ್ಕುಲು ನಗರದಿಂದ 246 ಕಿಲೋಮೀಟರ್ ದೂರದಲ್ಲಿ ಮತ್ತು 53 ಕಿಲೋಮೀಟರ್ ಆಳದಲ್ಲಿತ್ತು ಎಂದು ಹೇಳಲಾಗಿದೆ ಆದರೆ ಕಂಪನದಿಂದ ಸದ್ಯ ಈವರೆಗೆ ಯಾವುದೇ ಜೀವ ಹಾನಿಯಾಗಿರುವ ಬಗ್ಗೆ ಮತ್ತು ಆಸ್ತಿ-ಪಾಸ್ತಿಗೆ ನಾಶವಾಗಿರುವ ಬಗ್ಗೆಯೂ ಯಾವುದೇ ವರದಿಗಳು ಬಂದಿಲ್ಲ ಎಂದು ಹೇಳಲಾಗಿದೆ.