ಪೆರುವಿನಲ್ಲಿ ಭೂಕಂಪನ: 40 ಜನರಿಗೆ ಗಾಯ

ಪೆರುವಿನಲ್ಲಿ ಭೂಕಂಪನ:  40  ಜನರಿಗೆ ಗಾಯ

ಬ್ಯೂನಸ್ ಐರಿಸ್, ಜುಲೈ 31 ಪೆರು ವಾಯುವ್ಯಭಾಗದಲ್ಲಿ  ಸಂಭವಿಸಿದ ಪ್ರಬಲ ಭೂಕಂಪನದಿಂದ  ಕನಿಷ್ಠ 41 ಜನರು ಗಾಯಗೊಂಡಿದ್ದಾರೆ.
ಕಂಪನದ ತೀವ್ರತೆ  ರಿಕ್ಟರ್  ಮಾಪನದಲ್ಲಿ 6.1  ಎಂದು ದಾಖಲಾಗಿದೆ.  ಶುಕ್ರವಾರ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರ ಬಿಂದು 22 ಮೈಲಿ ಆಳದಲ್ಲಿ  ಮತ್ತು ಸುಲ್ಲಾನಾ ನಗರದ ಸಮೀಪದಲ್ಲಿತ್ತು  ಎಂದು ವರದಿಯಾಗಿದೆ.
ಕಂಪನದಿಂದ ಸುಲ್ಲಾನಾ ನಗರದಲ್ಲಿ 35 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಪೈಕಿ ಇಬ್ಬರಿಗೆ ಗಂಭೀರ ಗಾಯಾಗಳಾಗಿದೆ. ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ  ರೇಡಿಯೋ ಪ್ರಕಾರ, ಪ್ರಾದೇಶಿಕ ರಾಜಧಾನಿ ಪಿಯುರಾದಲ್ಲಿ ಇನ್ನೂ 6 ಜನರು ಜನರು ಗಾಯಗೊಂಡಿದ್ದಾರೆ.
ಈಗಾಗಲೇ  20 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಕಂಪನದದಿಂದ  , ಹಲವು  ವಸತಿ ಕಟ್ಟಡಗಳು ಮತ್ತು ದೇವಾಲಯಗಳಿಗೂ  ಹಾನಿಯಾಗಿದೆ  ಎಂದೂ  ಹೇಳಲಾಗಿದೆ .

ಸುದ್ದಿ ಓದಿ