ಅಂತರರಾಷ್ಟ್ರೀಯ

ನೇಪಾಳದಲ್ಲಿ ಭಾರಿ ಭೂಕಂಪ

ನೇಪಾಳದಲ್ಲಿ ಭಾರಿ ಭೂಕಂಪ

ಕಠ್ಮಂಡು, ಸೆಪ್ಟೆಂಬರ್ 16:  ನೇಪಾಳದಲ್ಲಿ ಇಂದು ಬೆಳಗಿನ ಜಾವ   ಭಾರಿ ಭೂ ಕಂಪನ ಸಂಭವಿಸಿದೆ. ಸ್ಥಳೀಯ  ಕಾಲ ಮಾನ ಬೆಳಗಿನ ಜಾವ 5.19ರಲ್ಲಿ  ಭೂಕಂಪನ ಸಂಭವಿಸಿದೆ. ಕಠ್ಮಂಡು ಸಮೀಪದ ಸಿಂಧುಪಾಲ್ಚೋಕ್ ಜಿಲ್ಲೆಯ ರಾಮ್‌ಚೆ ಎಂಬಲ್ಲಿ ಭೂ ಕಂಪದ ಕೇಂದ್ರಬಿಂದು ಆವೃತ್ತಗೊಂಡಿದೆ.

ಭೂಕಂಪನದಿಂದ ಸಂಭವಿಸಿರುವ   ಜೀವ  ಹಾಗೂ ಆಸ್ತಿಪಾಸ್ತಿ ಹಾನಿಯ ಮಾಹಿತಿ ಇನ್ನೂ   ತಿಳಿಯಬೇಕಿದೆ. ರಿಕ್ಟರ್  ಮಾಪನದಲ್ಲಿ  ಭೂಕಂಪನ ಶೇ 6 ರಷ್ಟು ದಾಖಲಾಗಿದೆ ಎಂದು   ನೇಪಾಳ ಭೂಕಂಪನ ಕೇಂದ್ರ ತಿಳಿಸಿದೆ.

2015 ರಲ್ಲಿ ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪದಲ್ಲಿ  ಕನಿಷ್ಠ 8,857  ಜನರು  ಸಾವನ್ನಪ್ಪಿ, 21952 ಮಂದಿ ಗಾಯಗೊಂಡಿದ್ದರು.  35 ಲಕ್ಷ ಜನರು ನಿರಾಶ್ರಿತರಾಗಿದ್ದರು.

ಸುದ್ದಿ ಓದಿ