ದೆಹಲಿ - ಹೈದರಾಬಾದ್ ನಲ್ಲಿ ಭೂಕಂಪನ
ನವದೆಹಲಿ, ಜುಲೈ 26 ನವದೆಹಲಿ ಮತ್ತು ಹೈದರಾಬಾದ್ ನಲ್ಲಿ ಭೂಕಂಪ ಸಂಭವಿಸಿದ ವರದಿಯಾಗಿದೆ.
ದೆಹಲಿಯಲ್ಲಿ ಭೂಕಂಪನದ ವರದಿಯಾಗಿದ್ದು ಪರಿಣಾಮ ಕೆಲ ಕಾಲ ಮೆಟ್ರೋ ಸೇವೆ ಸ್ಥಗಿತಗಿಗೊಳಿಸಲಾಗಿದೆ ಎಂದು ಹೇಳಲಾಗಿದೆ.
ದೆಹಲಿ ಮೆಟ್ರೋ ರೈಲು ನಿಗಮದ ಪ್ರಕಾರ , ಬೆಳಿಗ್ಗೆ 6.42 ರ ಸುಮಾರಿಗೆ ಸ್ವಲ್ಪ ಕಂಪನ ವಾಗಿರುವುದು ಖಚಿತವಾಗಿದೆ . ಆದರೆ ಇದರಿಂದ ಯಾವುದೇ ಸಾವು, ನೋವು ಆಸ್ತಿ ಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ.
ಆದರೆ ಕಾಲ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಭಾನುವಾರ ಸಿಕ್ಕಿಂನಲ್ಲಿ 4 ತೀವ್ರತೆಯ ಭೂಕಂಪ ಸಂಭವಿಸಿತ್ತು ಆದರೆ ಸಾವು-ನೋವು ಅಥವಾ ಆಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.