ರಾಜಸ್ತಾನದ ಬಿಕಾನೇರ್ ನಲ್ಲಿ ಭೂಕಂಪನ
ನವದೆಹಲಿ, ಜುಲೈ 21 ದೇಶದ ಹಲವೆಡೆ ಬುಧವಾರ ಎರಡು ರಾಜ್ಯದಲ್ಲಿ ಭೂಕಂಪನದ ಅನುಭವವಾಗಿರುವ ವರದಿಯಾಗಿದೆ. ಮೊದಲ ಕಂಪನ ಮೇಘಾಲಯ ರಾಜ್ಯದಲ್ಲಿ ಸಂಭವಿಸಿರುವುದಾಗಿ ವರದಿಯಾಗಿದೆ.
ಇದಾದ ಕೆಲವು ಗಂಟೆಗಳ ಬಳಿಕ ರಾಜಸ್ತಾನದ ಬಿಕಾನೇರ್ ನಲ್ಲಿ ಕಂಪನದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಜಸ್ತಾನದ ಬಿಕಾನೇರ್ ನಲ್ಲಿ ಇಂದು ಬೆಳಿಗ್ಗೆ ಭೂಕಂಪನ ಸಂಭವಿಸಿದೆ.ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3 ಎಂದು ದಾಖಲಾಗಿದೆ. ಆದರೆ ಈ ಘಟನೆಯಲ್ಲಿ ಜೀವ ಹಾನಿ, ಆಸ್ತಿ-ಹಾನಿ ಯಾಗಿರುವ ವರದಿಯಾಗಿಲ್ಲ ಎಂದೂ ಹೇಳಲಾಗಿದೆ.