ಪುರಸಭೆ ನಲ್ಲಿಗಳ ಕಟಬಾಕಿಯನ್ನು ತಕ್ಷಣವೇ ಭರಿಸಬೇಕು: ಮುಖ್ಯಾಧಿಕಾರ ದಡ್ಡಿ
ಮಹಾಲಿಂಗಪುರ 01: ಪಟ್ಟಣದ ಪ್ರತಿ ವಾರ್ಡ್ ನಲ್ಲಿ ನೀರಿನ ನಲ್ಲಿಗಳ ಕಟಬಾಕಿಯನ್ನು ಸಾರ್ವಜನಿಕರು ತಕ್ಷಣದಿಂದಲೇ ಭರಣಾ ಮಾಡಬೇಕು, ತಪ್ಪಿದರೆ ಪುರಸಭೆ ತಮಗೆ ನೀಡಿರುವ ನೀರು ಸರಬರಾಜನ್ನು ಸ್ಥಗಿತಗೊಳಿಸುತ್ತದೆ ಎಂದು ಮುಖ್ಯಾಧಿಕಾರಿ ಈರಣ್ಣ ದಡ್ಡಿ ತಿಳಿಸಿದರು.
ನಿಮ್ಮ ಕರ ನಿಮ್ಮ ಅಭಿವೃದ್ಧಿ ಲೆಕ್ಕಾಚಾರದಂತೆ ಪುರ ಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಸಿಬ್ಬಂದಿಗಳು ಸೋಮವಾರ ಮಹಾಲಿಂಗಪುರ ನಲ್ಲಿ ನೀರು ಬಳಕೆ ಮಾಡಿ ಪುರಸಭೆಗೆ ಕಟಬಾಕಿದಾರರಾಗಿರುವವರ ಮನೆಗಳಿಗೆ ತೆರಳಿ ಕರ ತುಂಬುವಂತೆ ಮನವರಿಕೆ ಮಾಡಿದರು.
ಇದೆ ಸಂದರ್ಭದಲ್ಲಿ ತುಂಬದೆ ಇರುವವರಿಗೆ ಕೊನೆಯ ಅವಕಾಶ ನೀಡಿದರೆ, ತಿಂಗಳುಗಳಿಂದ ಸತಾಯಿಸುತ್ತಾ ಬಂದಿರುವ ಕೆಲವರ ಮನೆಗಳ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದರು.
ಈ ವಸೂಲಿ ಕಾರ್ಯದಲ್ಲಿ ಪುರಸಭೆಯ ವ್ಯವಸ್ಥಾಪಕ ಎಸ್ ಎನ್. ಪಾಟೀಲ್, ಹಿರಿಯ ಆರೋಗ್ಯ ನೀರೀಕ್ಷ ಎಂ ಎಂ.ಮುಗಳಖೋಡ, ವಸೂಲಿ ಸಹಾಯಕರಾದ ಎಂ ಕೆ. ದಳವಾಯಿ, ದುರ್ಗಪ್ಪ ಮಾವಿನಹಿಂಡಿ, ಸಿಬ್ಬಂದಿಗಳಾದ ಎಸ್ ಆರ್. ಮಾವಿನಹಿಂಡಿ,ಮಹಾಲಿಂಗ ಗಸ್ತಿ, ಎಂ ಡಿ. ಕುಮಾರ, ಹಣ್ಮಂತ ಭಜಂತ್ರಿ ಇದ್ದರು.