ಮಾದಕ ವಸ್ತು ಮಾರಾಟ ಯತ್ನ: ಇಬ್ಬರ ಬಂಧನ

ಮಾದಕ ವಸ್ತು ಮಾರಾಟ ಯತ್ನ: ಇಬ್ಬರ ಬಂಧನ
ಮಾದಕ ವಸ್ತು ಮಾರಾಟ ಯತ್ನ: ಇಬ್ಬರ ಬಂಧನ ಬೆಂಗಳೂರು, ಜು.2 (ಯುಎನ್ಐ) ನಗರದಲ್ಲಿ ವಿದ್ಯಾರ್ಥಿ ಹಾಗೂ ಐಟಿಬಿಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಜಿಲಾಲ್ ಖಾನ್ ( 20) ನಿಶಾಂತ್ ಹರಿರಾಮ್(25) ಬಂಧಿತ ಆರೋಪಿಗಳು. ಕೋರಮಂಗಲದ ಲಕ್ಕಸಂದ್ರದಲ್ಲಿ ಆರೋಪಿಗಳನ್ನು ಬಂಧಿಸಿ, ಬಂಧಿತ ಆರೋಪಿಗಳಿಂದ 12 ಕೆಜಿ ಗಾಂಜಾ, 69 ಎಲ್ ಎಸ್ ಡಿ ಪೇಪರ್, 22 ಗ್ರಾಂ ಎಂಡಿಎಂಎ ಹಾಗೂ 22 ಟ್ಯಾಬ್ಲೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಜಿಲಾಲ್ ಖಾನ್, ಬೊಮ್ಮನಳ್ಳಿ ಯ ಕೋಳಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಅಧಿಕ ಬೆಲೆಗೆ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಈತನಿಂದ 8 ಕೆಜಿ ಗಾಂಜಾ ಸೇರಿ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ನಿಶಾಂತ್,ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತ ಕೂಡ ಆಂಧ್ರಪ್ರದೇಶದಿಂದ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದ. ಈತನಿಂದ 3 ಕೆಜಿ ಗಾಂಜಾ, 69 ಎಲ್ ಎಸ್ ಡಿ ಪೇಪರ್, 22 ಗ್ರಾಂ ಎಂಡಿಎಂಎ ಹಾಗೂ 22 ಟ್ಯಾಬ್ಲೆಟ್ ಹಾಗೂ ಒಂದು ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಕೋ ಲೇಔಟ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್ ಎಸ್ ಚೌಧರಿ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಸುದ್ದಿ ಓದಿ