ಸಂತ್ರಸ್ತರಿಗೆ ನಿವೇಶನ; ಸರ್ಕಾರ ಹಕ್ಕುಪತ್ರ ನೀಡಲು ಮುಳುಗಡೆ ಸಂತ್ರಸ್ತರ ಮನವಿ
ಕೊಲ್ಹಾರ 06: ಬೆಂಗಳೂರಿನ ಕೋಗಿಲು ಸಂತ್ರಸ್ತರಿಗೆ ನಿವೇಶನ ಮನೆಗಳನ್ನು ಕಟ್ಟಿಕೊಡಲು ಮುಂದಾಗುತ್ತಿರುವ ಸರ್ಕಾರ ನಮಗೇಕೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ಮುಳುಗಡೆ ಸಂತ್ರಸ್ತರು ಸರ್ಕಾರದ ವಿರುದ್ಧ ಕಣ್ಣಿರು ಹಾಕುತ್ತಿದ್ದಾರೆ. ಕೃಷ್ಣಾ ನದಿ ಹಿನ್ನೀರಿನಲ್ಲಿ 25 ವರ್ಷಗಳ ಹಿಂದೆ ಮುಳುಗಡೆಯಾದ ಕೊಲ್ಹಾರ ಪಟ್ಟಣದ ಸಂತ್ರಸ್ತರು ಹೊಲ ಮನೆಗಳನ್ನು ಕಳೆದುಕೊಂಡು ಪುನರವಸತಿ ಪುನರ್ ನಿರ್ಮಾಣ ಅಧಿಕಾರಿಗಳು ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಇವರಿಗೆ 1997 ರಿಂದ ಇಲ್ಲಿಯವರೆಗೆ ಅರ್ಜಿ ಕೊಟ್ಟರು ನಮಗೆ ಹಕ್ಕುಪತ್ರ ನೀಡಿಲ್ಲ ಎಂದು ಕೈಯಲ್ಲಿ ಅರ್ಜಿ ಹಾಕಿದ ದಾಖಲಾತಿಗಳನ್ನು ಹಿಡಿದುಕೊಂಡು ತಗಡಿನ ಶೆಡ್ಡ್ ಮುಂದೆ ನಿಂತು ಅರ್ಜುನ ಕಾಸಪ್ಪ ನಾಗರಾಳ ಕುಟುಂಬಸ್ಥರು ಕಣ್ಣಿರು ಹಾಕುತ್ತಿದ್ದಾರೆ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿಂದಲೋ ಬಂದವರಿಗೆ ಬೆಂಗಳೂರಿನ ಕೋಗಿಲೆಯ ಲೇಓಟಿನಲ್ಲಿ ನಿವೇಶನ ನೀಡಿ ಮನೆ ಕಟ್ಟಿಕೊಡುತ್ತಿದ್ದಾರೆ ಮುಳುಗಡೆ ಸಂತ್ರಸ್ತರ ನೆರವಿಗೆ ಯಾಕೆ ಬರುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಕಲರ್ ಬಾಕ್ಸ್ 25 ವರ್ಷಗಳಿಂದ ಹೊಲ ಮನೆಗಳನ್ನು ಕಳೆದುಕೊಂಡು ಸಂಬಂಧಪಟ ಇಲಾಖೆ ಅರ್ಜಿ ಸಲ್ಲಿಸಿದರು ನಮಗೆ ಹಕ್ಕುಪತ್ರ ನೀಡಿಲ್ಲ ಬೆಂಗಳೂರಿನ ಕೋಗಿಲೆಯ ಲೇಓಟಿನಲ್ಲಿ ಎಲ್ಲಿಂದಲೋ ಬಂದವರಿಗೆ ಸರ್ಕಾರ ಮನೆ ಕಟ್ಟಿಕೊಡಲು ಹೊರಟಿದೆ ಇದು ಯಾವ ನ್ಯಾಯ - ಲಕ್ಷ್ಮೀಬಾಯಿ ನಾಗರಾಳ ಕಾಸಪ್ಪನ ಪತ್ನಿ ಕೊಲ್ಹಾರ