ಜಮ್ಮು ಗಡಿಯಲ್ಲಿ ಗುಂಡೇಟಿನಿಂದ ಐಇಡಿ ಅಳವಡಿಸಿದ್ದ ಡ್ರೋಣ್‍ ಪತನ

ಜಮ್ಮು ಗಡಿಯಲ್ಲಿ ಗುಂಡೇಟಿನಿಂದ ಐಇಡಿ ಅಳವಡಿಸಿದ್ದ ಡ್ರೋಣ್‍ ಪತನ

  ಜಮ್ಮು, ಜುಲೈ 23 - ಜಮ್ಮು ನಗರ ಹೊರವಲಯದ ಕನ್ಹಚಾಕ್‍ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸಿದ್ದ ಡ್ರೋಣ್‍ ವೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ.
 ಕಳೆದ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕನ್ಹಚಾಕ್‍ ಪ್ರದೇಶದಲ್ಲಿ ಡ್ರೋಣ್‍ ಅನ್ನು ಹೊಡೆದುರುಳಿಸಿ, ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು.
 ಹಾರಾಡುತ್ತಿದ್ದ ವಸ್ತುವೊಂದನ್ನು ಗಮನಿಸಿದ ಪೊಲೀಸರು ಕೆಲ ಸುತ್ತು ಗುಂಡು ಹಾರಿಸಿದ್ದಾರೆ.
 
 ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಗುರ್ಹಾ ಪಟ್ಟಣ್‍ ಗ್ರಾಮದಲ್ಲಿ ಡ್ರೋಣ್‍ ಮತ್ತು ಒಂದು ಪ್ಯಾಕೆಟ್‍ ಪತ್ತೆಯಾಗಿದೆ. ಈ ಸ್ಥಳ ಜಮ್ಮು-ಅಖನೂರ್ ರಾಷ್ಟ್ರೀಯ ಹೆದ್ದಾರಿಗೆ  10-12 ಅಡಿ ಅಂತರದಲ್ಲಿದೆ.
 ಗುಂಡೇಟಿನಿಂದ ಡ್ರೋಣ್‍ ನ ಒಂದು ಬ್ಯಾಟರಿ ಹಾನಿಗೊಂಡಿದೆ.
 ಪೊಲೀಸ್ ನಿಯಂತ್ರಣಾ ಕೊಠಡಿಯ ಬಾಂಬ್ ನಿಷ್ಕ್ರಿಯ ದಳ ತಕ್ಷಣವೇ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದೆ.
  ಒಂದು ಪ್ಯಾಕೆಟ್‍ ಮತ್ತು ತೆಳುವಾದ ದಾರವನ್ನು ಸಿಬ್ಬಂದಿ ಗುರುತಿಸಿದ್ದಾರೆ.  6.5 ಅಡಿ ಉದ್ದ ಡ್ರೋಣ್‍ , ಆರು ರೆಕ್ಕೆಗಳು, ಎರಡು ಆಂಟೆನಾಗಳು ಮತ್ತು ನಾಲ್ಕು ಬ್ಯಾಟರಿಗಳನ್ನು ಒಳಗೊಂಡಿದೆ.
  ಪೊಲೀಸರು ಈ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಸುದ್ದಿ ಓದಿ