ಭೀಕರ ಕಾರು ಅಪಘಾತ: ದೂರು ದಾಖಲು
ಬೆಂಗಳೂರು, ಆ.31 ತಡರಾತ್ರಿ ಕೋರಮಂಗಲ 80 ಅಡಿ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿ ಸತೀಶ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸತೀಶ್ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 304ಎ ಮತ್ತು 279 ಅಡಿಯಲ್ಲಿ ಆಡುಗೊಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಸ್ತೆ ಬದಿಯ ಪಾರ್ಕ್ ಬಳಿ ಆಫ್ ಲೈನ್ ಮಾಡಿ ರಸ್ತೆ ಬದಿ ಕ್ಯಾರು ನಿಲ್ಲಿಸಿ ನಿದ್ರೆಗೆ ಜಾರಿದ್ದೆ. ಸ್ವಲ್ಪ ಸಮಯದ ಬಳಿಕ ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿ ಎಚ್ಚರಗೊಂಡೆ. ಕೂಡಲೇ ಎದ್ದು ನೋಡಿದಾಗ ರಸ್ತೆಯಲ್ಲಿ ಕಾರಿನಿಂದ ದಟ್ಟ ಹೊಗೆ ಬರುತ್ತಿತ್ತು. ಗಾಬರಿಗೊಂಡು ತಕ್ಷಣ ರಸ್ತೆಯಲ್ಲಿ ಬರುತ್ತಿದ್ದ ಕೆಲ ವಾಹನಗಳನ್ನು ತಡೆದು ಕಾರಿನಲ್ಲಿದ್ದವರ ರಕ್ಷಣೆಗೆ ಯತ್ನಿಸಿದ್ದೆ. ನಂತರ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದರು.
ಫುಡ್ ಡೆಲಿವರಿ ಬಾಯ್ಸ್ ಜೊತೆಗೂಡಿ ಕಾರಿನಲ್ಲಿದ್ದ ಯುವಕ ಯುವತಿಯರ ರಕ್ಷಣೆಗೆ ಪ್ರಯತ್ನಿಸಲಾಯಿತು. ಈ ವೇಳೆ ಆರು ಜನರು ಮೃತಪಟ್ಟಿದ್ದರು. ಇರದಲ್ಲಿ ಓರ್ವನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರು. ಆದರೆ, ಆತ ಸಹ ಬದುಕುಳಿಯಲಿಲ್ಲ ಎಂದು ಘಟನೆ ಬಗ್ಗೆ ಕ್ಯಾಬ್ ಚಾಲಕ ಸತೀಶ್ ಪೊಲೀಸರ ಬಳಿ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಚಾಲಕ ಕರುಣಾ ಸಾಗರ್ ವಿರುದ್ಧ ದೂರು ದಾಖಲಾಗಿದೆ. ಯಾವುದೋ ಕಾರಣಕ್ಕೆ ವೇಗವಾಗಿ ಕಾರು ಚಲಾಯಿಸಿ ಫುಟ್ ಪಾತ್ ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬ್ಯಾಂಕ್ನ ಕಟ್ಟಡಕ್ಕೆ ಡಿಕ್ಕಿ ಹೊಡೆದು ಹಾನಿಯಾಗಿದೆ. ಈ ವೇಳೆ ಅಪಘಾತದಲ್ಲಿ ಏಳು ಜನರು ಪ್ರಜ್ಞಾ ಹೀನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಪಘಾತಕ್ಕೆ ಕಾರಣವಾದ ಚಾಲಕನ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಬ್ ಚಾಲಕ ಸತೀಶ್ ದೂರು ನೀಡಿದ್ದಾರೆ.
ನಗರದ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ ಸಂಭವಿಸಿದ ಕಾರು ರಸ್ತೆ ಅಪಘಾತದಲ್ಲಿ 7 ಜನರು ಮೃತಪಟ್ಟಿದ್ದರು.