ನೂತನ ಪ್ರಾಚಾರ್ಯರಾಗಿ ಡಾ. ಎಸ್.ಪಿ ತಳವಾರ ಅಧಿಕಾರ ಸ್ವೀಕಾರ
ಕಾಗವಾಡ 15: ಪಟ್ಟಣದ ಪ್ರತಿಷ್ಟಿತ ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು, ಹಾಗೂ ಸಹಪ್ರಾಧ್ಯಾಪಕ ಡಾ. ಎಸ್.ಪಿ ತಳವಾರ ಅಧಿಕಾರ ಇತ್ತೀಚಿಗೆ ಸ್ವೀಕರಿಸಿದ್ದಾರೆ.
ಇತಿಹಾಸ ವಿಭಾಗದ ಮುಖ್ಯಸ್ಥರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಎಸ್.ಎ. ಕರ್ಕಿ ಅವರು ಇತ್ತೀಚಿಗೆ ನಿವೃತ್ತಿ ಹೊಂದಿದ್ದು, ಈ ಹುದ್ದೆಯನ್ನು ಡಾ. ಎಸ್.ಪಿ ತಳವಾರ ವಹಿಸಿಕೊಂಡಿದ್ದಾರೆ. ಅವರನ್ನು ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.