ದೇಶದ ಸಂವಿಧಾನ ತಿದ್ದುಪಡಿಗೆ ನಡೆದಿದೆ ಹುನ್ನಾರ, ಎಚ್ಚರಿಗೆ ವಹಿಸದಿದ್ದರೆ ಕಾದಿದೆ ಆಪತ್ತು : ಡಾ. ರಾಜರತ್ನ ಅಂಬೇಡ್ಕರ ಕಳವಳ

ದೇಶದ ಸಂವಿಧಾನ ತಿದ್ದುಪಡಿಗೆ ನಡೆದಿದೆ ಹುನ್ನಾರ, ಎಚ್ಚರಿಗೆ ವಹಿಸದಿದ್ದರೆ ಕಾದಿದೆ ಆಪತ್ತು : ಡಾ. ರಾಜರತ್ನ ಅಂಬೇಡ್ಕರ ಕಳವಳ
ಬೆಳಗಾವಿ/ ಸಂಕೇಶ್ವರ : ಸದ್ಯ ದೇಶದಲ್ಲಿ ಸಂವಿಧಾನ ತಿದ್ದುಪಡಿ, ಮೀಸಲಾತಿ ಕಿತ್ತುಕೋಳ್ಳುವ ಹುನ್ನಾರದ ಕೆಲಸಗಳನ್ನು ಮನುವಾದಿಗಳು ಮಾಡುತಿದ್ದು, ಇದರ ಬಗ್ಗೆ ದಲಿತರು ಎಚ್ಚರದ ಹೆಜ್ಜೆ ಇಡುವ ಮೂಲಕ ಜಾಗೃತಿ ವಹಿಸಬೇಕಾಗಿದೆ ಎಂದು ಬುದ್ದಿಷ್ಠ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ, ಡಾ. ಬಿ.ಆರ್.ಅಂಬೇಡ್ಕರ ಅವರ ಮರಿಮೊಮ್ಮಗ ಡಾ. ರಾಜರತ್ನ ಅಂಬೇಡ್ಕರ ಹೇಳಿದರು.

      ಸಂಕೇಶ್ವರದಲ್ಲಿ ಭೀಮಾ-ಕೊರೆಗಾಂವ ವಿಜಯೋತ್ಸವದ 205ನೇ ವರ್ಷಾಚರಣೆ, ಹಾಗೂ 192ನೇ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಡಾ. ಬಿ.ಆರ್.ಅಂಬೇಡ್ಕರ ಜನಜಾಗ್ರತಿ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಸದ್ಯ ದೇಶದಲ್ಲಿ ಡಾ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಬದಲಿಸುವ ಪ್ರಯತ್ನಗಳು ನಡೆದಿವೆ. ದಲಿತರಿಗಾಗಿ ಡಾ. ಅಂಬೇಡ್ಕರ್ ಅವರು ಪಟ್ಟಿರುವ ಶ್ರಮವನ್ನು ನಾವಿಂದು ನೆನಪಿಸಿ ಮುನ್ನಡೆಯಬೇಕಿದೆ. ಡಾ. ಅಂಬೇಡ್ಕರರು ಇಲ್ಲವಾಗಿದ್ದರೆ ನಾವು ಎಲ್ಲಿ ಇರುತ್ತಿದ್ದೇವೆ ಎಂದು ಗೊತ್ತಾಗುತ್ತಿರಲಿಲ್ಲ ಎಂದು ನುಡಿದರು.  
         ಡಾ. ಅಂಬೇಡ್ಕರ್ ಅವರಿಗೆ ಶಾಹು ಮಹಾರಾಜ, ಮಹಾತ್ಮ ಫುಲೆ, ಶಿವಾಜಿ ಮಹಾರಾಜರು ನೀಡಿದ ಸಹಕಾರವನ್ನು ನಾವು ಎಂದಿಗೂ ಮರೆಯಲು ಸಾಧ್ಯ ಇಲ್ಲ. ಅಲ್ಲದೆ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಯಾರು ಮರೆಯುವಂತಿಲ್ಲ. ಸದ್ಯ ಭಾರತ ಸರಕಾರ 5ನೇ ತರಗತಿ ಮೇಲಿನ ವಿದ್ಯಾರ್ಥಿಗಳಿಗೆ ಭಗ್ವತ್‍ಗೀತಾ ಭೋದನೆ ಮಾಡಲು ಸರಕಾರ ಹೊರಟಿದೆ. ವೇಧ ಕಳಿಸಿ ನಮ್ಮನ್ನು ಮತ್ತೆ ಶೂಧ್ರನನ್ನಾಗಿ ಕಾಣಲಾಗುವ ಕಾಲ ಬರಬಹುದು, ಇವೆಲ್ಲದರ ನಡುವೆ ಇಂದು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಸದ್ಯ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲವನ್ನು ವ್ಯಾಪಾರಿಕರಣ ಮಾಡಲಾಗುತ್ತಿದೆ. ದೇಶದಲ್ಲಿ ಶಿಕ್ಷಣವನ್ನು ಹಿಂದಿ ಭಾಷೆಯಲ್ಲಿ ಕಲಿಸುವ ಹುನ್ನಾರ ನಡೆಯುತ್ತಿದೆ. ಇದರಿಂದ ನಮ್ಮ ಹಿಂದೂಳಿದ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ನುಡಿದರು.  
       ದೇಶದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಅವರು ಸಂವಿಧಾನವನ್ನು ರಚಿಸುವುದಕ್ಕಿಂತ ಮುಂಚೆ ದಲಿತರನ್ನು ಯಾರೂ ನಾಗರಿಕರಂತೆ ಕಾಣುತ್ತಲೆ ಇರಲಿಲ್ಲ. ಅಂಬೇಡ್ಕರರು ಸಂವಿಧಾನ ರಚಿಸಿದ ನಂತರ ದಲಿತರಿಗೆ ಸಮಾನತೆ, ಶಿಕ್ಷಣ ಮತ್ತು ಉದ್ಯೋಗಗಳು ಪ್ರಾಪ್ತಿಯಾದವು. ಆಗಲೆ ಅವರ ಆದಾಯವು ಪ್ರಾರಂಭವಾಯಿತು. 205 ವರ್ಷಗಳ ಹಿಂದೆ ಪೇಶ್ವೆಗಳ ವಿರುದ್ದ ಮಹಾರರು ಗಳಿಸಿದ ವಿಜಯವು ಭಾರತದ ಇತಿಹಾಸದಲ್ಲಿ ದಾಖಲೆ ಆಗಲೇ ಇಲ್ಲ.
      ಮನುವಾದಿಗಳು ಅಂಥ ಸತ್ಯವನ್ನು ದಾಖಲಿಸಲೇ ಇಲ್ಲ. ಈಗ ಪುಃನ ಸತ್ಯವನ್ನು ದೇಶದ ಜನರಿಗೆ ತಿಳಿಸುವ ಕಾಲ ಬಂದಿದೆ ಎಂದು ಅವರು ಹೇಳಿದರು. ದೇಶದ ಸಂವಿಧಾನದಂತೆ ಅನೇಕ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರಿಗಾಗಿ ರೂಪಿಸಲಾಗಿದ್ದು, ಅವುಗಳ ಪ್ರಯೋಜನವನ್ನು ದಲಿತ ಬಾಂಧವರು ಪಡೆಯಬೇಕು. ಇದರಿಂದ ದಲಿತರ ಒಟ್ಟು ಅಭಿವೃದ್ದಿ ಆಗುತ್ತದೆ. ಪ್ರಧಾನಿ ಮೋದಿ ಅವರು ನಮ್ಮ ಮನವಿಯನ್ನು ಆಲಿಸಲಿ. ದೇಶದಲ್ಲಿ ಒನ್ನ ನೇಶನ್, ಒನ್ ಎಜುಕೇಶನ್ ನೀತಿಯನ್ನು ಜಾರಿ ತರಲಿ ಎಂದು ಒತ್ತಾಯಿಸಿದರು.  
       ಸಾನಿಧ್ಯ ವಹಿಸಿದ್ದ ಹೆಬ್ಬಾಳದ ಬಸವ ಚೇತನ ದೇವರು ಮಾತನಾಡಿ, ದಲಿತರು ವೈದಿಕರ ಮಾತುಗಳನ್ನು ನಂಬಿ ದೇವರುಗಳಿಗೆ ಪ್ರಾಣಿ ಬಲಿಕೊಡುವ ಕೆಲಸವನ್ನು ತಕ್ಷಣವೇ ಕೈಬಿಡಬೇಕು. ಪ್ರತಿಯೊಬ್ಬ ದಲಿತರು ತಮ್ಮ ಬದುಕಿಗೆ ಪುನಶ್ಚೆತನ ತಂದು ಕೊಟ್ಟ ಅಂಬೇಡ್ಕರರ ಭಾವಚಿತ್ರವನ್ನು ಮನೆಯಲ್ಲಿ ಹಾಕಿ ಅವರ ತತ್ವಗಳನ್ನು ಬದುಕಿನೂದ್ದಕ್ಕೂ ಪಾಲಿಸಬೇಕು ಎಂದರು.
       ಇದೇ ಸಂದರ್ಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಜನಜಾಗ್ರತಿ ವೇದಿಕೆಯ ವತಿಯಿಂದ 1 ಲಕ್ಷ ರೂಪಾಯಿಗಳನ್ನು ಬುದ್ದಿಷ್ಠ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ, ಡಾ. ಬಿ.ಆರ್.ಅಂಬೇಡ್ಕರ ಅವರ ಮರಿಮೊಮ್ಮಗ ಡಾ. ರಾಜರತ್ನ ಅಂಬೇಡ್ಕರ ಅವರಿಗೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಬಿ.ಆರ್.ಅಂಬೇಡ್ಕರ ಜನಜಾಗ್ರತಿ ವೇದಿಕೆಯ ಅಧ್ಯಕ್ಷ ದಿಲೀಪ ಹೊಸಮನಿ ವಹಿಸಿದ್ದರು.

      ಸಮಾರಂಭದಲ್ಲಿ ಹಿರಿಯ ಸಹಕಾರಿ ಧುರೀಣರಾದ ಎಸ್.ಎಸ್.ಶಿರಕೋಳಿ, ಶ್ರೀಕಾಂತ ಹತನೂರಿ, ಪುರಸಭೆಯ ಸದಸ್ಯ ಜಿತೇಂದ್ರ ಮರಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ವಿಕ್ರಂ ಕರನಿಂಗ, ಬಸವರಾಜ ಕೋಳಿ, ಆನಂದ ಕೆಳಗಡೆ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ