ಸಪ್ತಋಷಿಗಳು ಕಂಡಿದ್ದ ಕನಸ್ಸನ್ನು ಡಾ. ಕೋರೆ ನನಸಾಗಿಸಿದ್ದಾರೆ : ಸಿಎಂ ಬೊಮ್ಮಾಯಿ, ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಜೊತೆ ಕೋರೆ ಶತಮಾನೋತ್ಸವ ಆಚರಣೆ ವಿಶೇಷ : ಕೇಂದ್ರ ಸಚಿವ ಪ್ರಧಾನ
ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಿಸಿ, ಪೂರ್ಣಾವಧಿ ಅಧಿವೇಶನ ನಡೆಸಿ : ಸರಕಾರಕ್ಕೆ ಕೋರೆ ಮನವಿ
ಬೆಳಗಾವಿ, ಅ, 15 : ಲಿಂಗಾಯತ ಸೊಸೈಟಿ ಸ್ಥಾಪನೆಗೆ ಸಪ್ತ ಋಷಿಗಳು ಕಂಡಿದ್ದ ಕನಸ್ಸನ್ನು ಡಾ. ಪ್ರಭಾಕರ ಕೋರೆ ಅವರು ನನಸಾಗಿ ಮಾಡಿದ್ದಾರೆ. ಸಂಸ್ಥೆ ಬೆಳೆಯಲು ಕೋರೆ ಅವರು ಪಟ್ಟಿರುವ ಶ್ರಮ ರಾಜಕೀಯದ ರಂಗಕ್ಕೆ ನೀಡಿದ್ದರೆ ದೊಡ್ಡ ನಾಯಕರಾಗಿ ಹೊರಹೊಮ್ಮುತ್ತಿದ್ದರು. ಆದರೆ ಅವರು ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರನ್ನು ದೊಡ್ಡವನ್ನಾಗಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಡಾ. ಪ್ರಭಾಕರ ಕೋರೆ ಅವರು 75 ವರ್ಷದ ಜನ್ಮದಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆರೋಗ್ಯ, ಶಿಕ್ಷಣ, ಕೃಷಿ ಜೊತೆಗೆ ಎಲ್ಲ ರಂಗದಲ್ಲಿ ಸಂಸ್ಥೆಯನ್ನು ತೋಡಗಿಸುವ ಮೂಲಕ ಉತ್ತಮ ಕಾರ್ಯದೊಂದಿಗೆ ಕೋರೆ ಅವರು ಆದರ್ಶ ಜೀವನ ನಡೆಸಿದ್ದಾರೆ. ಕೆಎಲ್‍ಇ ಸಂಸ್ಥೆ ಅವರ ಮುಂದಾಳತ್ವದಲ್ಲಿ ಕ್ವಾಲಿಟಿಯನ್ನು ಅಳವಡಿಸಿಕೊಂಡು ಮುನ್ನಡಿಸಿದ್ದಾರೆ. ನಡೆದು ಬಂದ ದಾರಿ ಗಮನಿಸಿದಾಗ ಕೆಎಲ್‍ಇ ಸೊಸೈಟಿ ಹಲಾವರು ಸವಾಲುಗಳನ್ನು ಮುನ್ನಡಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಿದ್ದಾರೆ.

ಎಲ್ಲ ಸವಾಲುಗಳನ್ನು ಎದುರುರಿಸಿ ದೊಡ್ಡ ವಿಶ್ವ ವಿದ್ಯಾಲಯಯಾಗಿ ಕೆಎಲ್‍ಇಯನ್ನು ಪರಿವರ್ತಿಸಿದರು. ಕೋರೆ ಅವರು ಸಂಸ್ಥೆ ಬೆಳೆಯಲು ಪಟ್ಟ ಶ್ರಮವನ್ನು ರಾಜಕೀಯ ರಂಗಕ್ಕೆ ನೀಡಿದ್ದರೆ ಅವರು ದೊಡ್ಡ ನಾಯಕರಾಗಿ ಹೊರಹೊಮ್ಮುತ್ಯಿದ್ದರು. ಆದರೆ ಹಲವಾರ ಗ್ರಾಮೀಣ ಭಾಗದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ದೊಡ್ಡವರನ್ನಾಗಿ ಮಾಡಿದ್ದಾರೆ. ಕೆಎಲ್‍ಇ ಸಂಸ್ಥೆ ಸರಕಾರ ಮಾಡದ ಕೆಲಸ ಮಾಡುತ್ತಿದೆ. ಕೆಎಲ್‍ಇ ಸಂಸ್ಥೆಯ ಪ್ರೇರಣೆಯಿಂದ ಬೇರೆ ಜಿಲ್ಲೆಯಲ್ಲಿ ಬೇರೆ ಸಂಸ್ಥೆಗಳು ಕಾರ್ಯ ಮಾಡುತ್ತಿವೆ. ಅದಕ್ಕೆ ಕೆಎಲ್‍ಇ ಆದರ್ಶ ಕಾರಣ ಎಂದರು. ಸಂಸ್ಥೆಗೆ ಹೊಸತನವನ್ನು ಬಯಸಿ ಹೊಸ ಅವಿಷ್ಕಾರ್ ಹುಡುಕುವ ಕಾರ್ಯ ಕೋರೆ ಅವರು ಮಾಡಿದ್ದಾರೆ ಎಂದು ನುಡಿದರು.
ಕೋರೆಗೆ ಬುಲೇಟ್ ಮ್ಯಾನ್ ಬಿರುದು ನೀಡಿದ ಸಿಎಂ
ಪ್ರಭಾಕರ ಕೋರೆ ಅವರಿಗೆ ಸಿಎಂ ಬೊಮ್ಮಾಯಿ ಅವರು ಬುಲೇಟ್ ಮ್ಯಾನ್ ಎಂಬ ಬಿರುದು ನೀಡಿದ್ದಾರೆ. ಅವರು ಗುಂಡು ದೇಹದಲ್ಲಿ ಇಟ್ಟುಕೊಂಡು ನೋವಿನೊಂದಿಗೆ ಬಾಳುತ್ತಿದ್ದಾರೆ. ಗುಂಡು ಹೊಕ್ಕಾಗ ಇದು ನನ್ನ ಮರುಜನ್ಮದಲ್ಲಿ ಸಂಸ್ಥೆಗಾಗಿ ದುಡಿಯವದಾಗಿ ಹೇಳಿದ್ದ ಹಾಗೆ ನಡೆದುಕೊಂಡಿದ್ದಾರೆ. ಇನ್ನಷ್ಟು ನಿಮ್ಮ ಸೇವೆ ಕೆಎಲ್‍ಇ ಸಂಸ್ಥೆಗೆ ದೊರೆಯಲಿ ಎಂದು ಹಾರೈಸಿದರು. ಹಿಂದೆ ಒಂದು ಸಂದರ್ಭದಲ್ಲಿ ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಮೇಯರ್ ಮಾಡಲು ಎಮ್‍ಇಎಸ್ ನಗರಸೇವಕರ ಮತ ಹಾಕಿಸಿದ್ದಾರೆ ಎಂದರೆ ಅವರ ಪಾವರ್ ಎಷ್ಟಿದೆ ಅನ್ನೊದು ಅರಿತುಕೊಳ್ಳಬೇಕಿದೆ ಎಂದು ಗುಣಗಾನ ಮಾಡಿದರು.
ಸಪ್ತಋಷಿಗಳು ಕಟ್ಟಿದ ದೇವಾಲಯಕ್ಕೆ ಕೋರೆ ಚಿನ್ನದ ಕಳಸ ಇಟ್ಟಿದ್ದಾರೆ : ಬಿಎಸ್‍ವೈ
ಸಪ್ತಋಷಿಗಳು ಕಟ್ಟಿದ ಕೆ.ಎಲ್‍ಇ ಎಂಬ ಈ ದೇವಾಲಯಕ್ಕೆ ಡಾ. ಕೋರೆ ಅವರು ಚಿನ್ನದ ಕಳಸ ಇಟ್ಟವರಾಗಿದ್ದಾರೆ. ಸರಕಾರ ಮಾಡದ ಕೆಲಸ ಕೋರೆ ಅವರು ಮಾಡತಾ ಇದ್ದಾರೆ. ಈ ಸಂಸ್ಥೆಯಲ್ಲಿ ಕೋರೆ ಅವರು ಇತಿಹಾಸವಾಗಿ ಉಳಿಯಲಿದ್ದಾರೆ. ಬೆಳಗಾವಿಯಲ್ಲಿ ಪ್ರಥಮ ಅಧಿವೇಶನ ಮಾಡಲು ಎಲ್ಲ ಸೌಕರ್ಯ ನೀಡುವ ಮೂಲಕ ಈ ಸಂಸ್ಥೆ ಹಾಗೂ ಕೋರೆ ಅವರು ಸಹಕಾರ ನೀಡಿರುವದು ಸ್ಮರನೀಯ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಕೆಲವು ಜನರನ್ನು ನೋಡಿದಾಗ ಎನಾದರು ಸಾಧಿಸಬೇಕು ಎನಿಸುತ್ತದೆ ಅದಕ್ಕೆ ಕೋರೆ ಅವರು ಉದಾಹರಣೆಯಾಗಿದ್ದಾರೆ. ಸಪ್ತ ಋಷಿಗಳು ಬೂನಾಧಿ ಹಾಕಿರುವ ಈ ಸಂಸ್ಥೆ ವಿಶ್ವದಲ್ಲಿ ಹೆಸರು ವಾಸಿಯಾಗಲು ಕೋರೆ ಅವರು ಶ್ರಮ ಕಾರಣ. ಕೆಎಲ್.ಇ ಆಸ್ಪತ್ರೆಯ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ದೇವರ ಸ್ಥಾನ ಪಡೆದಿದ್ದಾರೆ. ಕೋರೆಯವರ ಬತ್ತದ ಉತ್ಸಾಹದಿಂದ ಸಂಸ್ಥೆ ಬಾನೆತ್ತರಕ್ಕೆ ಹಾರುತ್ತಿದೆ. ಅವರು ಶತಾಯುಷಿಯಾಗಿ ಬಾಳಲಿ ಎಂದು ಹಾರೈಸಿದರು.
ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಜೊತೆ ಕೋರೆ ಶತಮಾನೋತ್ಸವ ಆಚರಣೆ ವಿಶೇಷ
ಭಾರತ ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಜೊತೆ ಪ್ರಭಾಕರ್ ಕೋರೆ ಅವರು ಕೂಡಾ ಶತಮಾನೋತ್ಸವ ಆಚರಣೆ ಮಾಡಿ ಕೊಳ್ಳುವಂತಾಗಿರುವದು ವಿಶೇಷವಾಗಿದೆ. ಬಸವಣ್ಣನವರ ಹಾಗೂ ಚೆನ್ನಮ್ಮಾಜಿಯ ಈ ಪುಣ್ಯಭೂಮಿಯಲ್ಲಿ ಕೆಎಲ್‍ಇ ಸಂಸ್ಥೆಯು ಶಿಕ್ಷಣದೊಂದಿಗೆ ಸಮಾಜ ಸುಧಾರಣೆ ಕಾರ್ಯ ಮಾಡುವ ಮೂಲಕ ಸಪ್ತಋಷಿಗಳ ಕಂಡ ಕನಸು ಪೂರ್ಣ ಮಾಡುತ್ತಿರುವ ಸಂಸ್ಥೆಯ ಕಾರ್ಯ ಉತ್ತಮ ಬೆಳವಣಿಗೆಯಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ನುಡಿದರು.
ಹೆಸರು ಲಿಂಗಾಯ ಸಂಸ್ಥೆಯಾದರೂ ಎಲ್ಲ ಜಾತಿ ವರ್ಗಕ್ಕೆ ಅವಕಾಶ : ಕೇಂದ್ರ ಸಚಿವ ಜೋಶಿ
ಕೆಎಲ್‍ಇ ಹೆಸರು ಲಿಂಗಾಯ ಸಂಸ್ಥೆಯಾಗಿದ್ದರೂ ಇಲ್ಲಿ ಎಲ್ಲ ಜಾತಿ ವರ್ಗಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಹೊರದೇಶದಲ್ಲಿ ಕೂಡಾ ಕನ್ನಡ ದ್ವನಿ ಹೋಗಿರುವದಕ್ಕೆ ಕೆಎಲ್‍ಇ ಸಂಸ್ಥೆ ಹಾಗೂ ಪ್ರಭಾಕರ ಕೋರೆ ಕಾರಣ ಎಂದರು. ಸಂಸ್ಥೆ ಬೆಳೆಸುವಲ್ಲಿ ಕ್ವಾಲಿಟಿ ವ್ಯಕ್ತಿಯಾಗಿದ್ದಾರೆ. ಸಾವಿರ ಬೆಡ್‍ಗಳ ಆಸ್ಪತ್ರೆಯಲ್ಲಿ ಬಡಜನರಿಗೆ ಉಚಿತ ಸೌಕರ್ಯ ನೀಡುವ ಮೂಲಕ ಸಂಸ್ಥೆ ಬಡವರ ಪಾಲಿನ ದೇವರ ಸ್ವರೂಪಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ದೇಶದ ಅಜಾದಿಕಾ ಅಮೃತ ಮಹೋತ್ಸವ ಜೊತೆ ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ನಡೆಯುತ್ತಿರುವದು ವಿಶೇಷವಾಗಿದೆ. ಕೋರೆಯವರು ಮಾತಿನಲ್ಲಿ ಕೃತಿಯಲ್ಲಿ, ಮನಸ್ಸಿನಲ್ಲಿ ಸರಳ ಏಕಾಗ್ರತವಾಗಿರುತ್ತಾರೆ. ವಿದ್ಯೆ ಧಾನ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಪುಸ್ತಕದಲ್ಲಿ ತುಲಾಭಾರ ಮಾಡಲಾಗಿದೆ. ನೀವು ಮಾಡುತ್ತಿರುವ ಶಿಕ್ಷಣ ಜಾತ್ರೆಯೊಂದಿಗೆ ನಿಮ್ಮ ಶತಮಾನೋತ್ಸವ ಆಚರಣೆ ಮಾಡಿಕೊಳ್ಳಿ ಎಂದು ಕೋರೆಯವರಗೆ ಶುಭ ಹಾರಿಸಿದರು.
ಗೋವಾ ಸಿಎಂ ಪ್ರಮೋದ ಸಾವಂತ ಮಾತನಾಡಿ, ಕೆಎಲ್‍ಇ ಕ್ಯಾಂಪಸ್ ನೋಡಿ ದೆಹಲಿ ಕರ್ನಾಟಕ ಅಲ್ಲ ಹೊರದೇಶದಲ್ಲಿ ಕೂಡಾ ಇಂತಹ ವಾತಾವರಣ ಇಲ್ಲ ಅನ್ನೊವದು ನನ್ನ ಅಭಿಪ್ರಾಯವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಒಳ್ಳೆಯ ಅವಕಾಶ ವದಗಿಸಿಕೊಟ್ಟಿರುವ ಕೋರೆ ಅವರ ಕಾರ್ಯ ಶ್ಲಾಘನೀಯ. ನವಭಾರತ ನಿರ್ಮಾಣ ಕಾರ್ಯಕ್ಕೆ ಇಲ್ಲಿ ಕೋರೆ ಅವರು ಸಹಕಾರಿಯಾಗಲಿದ್ದಾರೆ ಎಂದು ನುಡಿದರು. ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಹಾರಾಷ್ಟ್ರ ಸಚಿವ ರಾಧಾಕೃಷ್ಣ. ವಿಕೆ ಪಾಟೀಲ, ಆರ್.ವ್ಹಿ.ದೇಶಪಾಂಡೆ ಅವರು ಮಾತನಾಡಿ, ಕೆಎಲ್.ಇ ಹೆಮ್ಮರವಾಗಲು ಕೋರೆ ಅವರ ಶ್ರಮ ಕಾರಣ ಎಂದು ನುಡಿದರು.
ಇದೇ ವೇಳೆ ಅಭಿನಂದನಾಪರ ನುಡಿಗಳನ್ನಾಡಿದ ಪ್ರಭಾಕರ ಕೋರೆ ಅವರು, ಇಂದು ನನ್ನ ಬದುಕಿನ ಅತ್ಯಂತ ಮಹತ್ವದ ದಿನವಾಗಿದೆ. ತಂದೆ ತಾಯಿ ಆಶಿರ್ವಾದದಿಂದ ಹಾಗೂ ಸಮಾಜದ ಜನರು ನೀಡಿದ ಸಹಕಾರದಿಂದ ನಾನು ನನ್ನ ಜೊತೆ ಸಂಸ್ಥೆ ಬೆಳಿಸಲು ಸಾದ್ಯವಾಗಿದೆ. ಸಂಸ್ಥೆಯಲ್ಲಿ ಕಿಡ್ನಿ, ಹೃದಯ ಬದಲಾವಣೆ ಮಾಡಲಾಗುತ್ತಿದೆ. ಅದರ ಜೊತೆ ಲಿವರ್ ಹಾಗೂ ಎದೆ ಬದಲಾವಣೆ ಯೋಜನೆ ಇವೆ. ಜಗತ್ತಿನಲ್ಲಿ ಆಸ್ಪತ್ರೆಯಲ್ಲಿ ಬರುವ ಎಲ್ಲ ನೂತನ ಸೇವೆ ನಮ್ಮಲ್ಲಿ ಮರು ದಿನ ಸಿಗುತ್ತದೆ. ಜನರ ಆಶಿರ್ವಾದ ಹಾಗೂ ಎಲ್ಲ ರಾಜಕೀಯ ಮುಖಂಡರು ನೀಡಿದ ಸಹಕಾರದಿಂದ ಈ ಮಟ್ಟಕ್ಕೆ ಕೆಎಲ್‍ಇ ಸಂಸ್ಥೆ ಬೆಳೆಯಲು ಕಾರಣವಾಯಿತು. ಒಳ್ಳೆಯ ಕೆಲಸ ಮಾಡಲು ಜಾತಿ, ಪಕ್ಷ, ಭಾಷೆ ಅವಶಕತೆ ಇಲ್ಲ ಎಂದರು.
ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಿಸಿ, ಪೂರ್ಣಾವಧಿ ಅಧಿವೇಶನ ನಡೆಸಿ : ಕೋರೆ
ಬೆಳಗಾವಿಯಲ್ಲಿ ಹೆಸರಿಗೆ ಅಧಿವೇಶನ ನಡೆಸುವದು ಬೇಡ. ಇಲ್ಲಿ ಬಂದು ಶಾಸಕರು, ಅಧಿಕಾರಿಗಳು ಚೈನಿ ಮಾಡಿಕೊಂಡು ಹೋಗುವದು ಬೇಡ, ಇಲ್ಲಿ ಶಾಸಕರ ಭವನ ನಿರ್ಮಿಸಿ, ಬೆಳಗಾವಿಯಲ್ಲಿ ಪೂರ್ಣಾವಧಿ ಅಧಿವೇಶನ ನಡೆಸಲು ಅವಕಾಶ ಮಾಡಿ ಕೊಡಿ ಎಂದು ಸಿಎಂ ಬೊಮ್ಮಾಯಿ ಅವರನ್ನು ಪ್ರಭಾಕರ ಕೋರೆ ಅವರು ವಿನಂತಿಸಿಕೊಂಡರು. ಅಲ್ಲದೆ ಕೆಎಲ್‍ಇ ಸಾಮಾಜೀಕ, ರಾಜಕೀಯವಾಗಿ ಎಲ್ಲ ರಂಗದಲ್ಲಿ ಈ ಸಂಸ್ಥೆ ಕೊಡುಗೆ ನೀಡಿದೆ. ನನ್ನ ಕೈಯಲ್ಲಿ ಆದಮಟ್ಟಿಗೆ ಸಂಸ್ಥೆಗೆ ಸೇವೆ ಮಾಡತೇನೆ. ಬಡರೈತ ಮಕ್ಕಳಿಗೆ ಸಂಸ್ಥೆಯಿಂದ ಸಂಪೂರ್ಣ ಉಚಿತ ಶಿಕ್ಷಣ ನೀಡುವದಾಗಿ ಘೋಷಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಂತೇಶ ಕವಟಗಿಮಠ, ಕೋರೆ ಅವರು 34 ಇದ್ದ ಕೆಎಲ್‍ಇ ಸಂಸ್ಥೆಗಳನ್ನು 293 ಸಂಸ್ಥೆಗಳನ್ನಾಗಿ ಮಾಡಿದರು. ಆರೋಗ್ಯ, ಸಹಕಾರ ಕ್ಷೇತ್ರದಲ್ಲಿ ಕೆಎಲ್‍ಇ ಸಂಸ್ಥೆ ಕಾಮದೇನು ಆಗಿ ಬೆಳೆಯಲು ಶ್ರಮಿಸಿದ್ದಾರೆ ಎಂದು ನುಡಿದರು. ಬಳಿಕ ಪ್ರಭಾಕರ್ ಕೋರೆ ಅವರ ಕುರಿತು ಬರೆಯಲಾದ ಪುಸ್ತಕ ಬಿಡುಗಡೆ ಮಾಡಲಾಯಿತು. ನಂತರ ಕೋರೆಯವರಿಗೆ ಪುಸ್ತಕಗಳಿಂದ ಗ್ರಂಥ ತುಲಾಭಾರ ಮಾಡಲಾಯಿತು. ಮಹಾಂತೇಶ ಕೌಜಲಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಗೋವಾ ಮಾಜಿ ಸಿಎಂ ಚರ್ಚಿಲ್ ಅಲೆಮಾವ್, ಸಚಿವರಾದ ಬಿ.ಸಿ.ನಾಗೇಶ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜ, ಮುರಗೇಶ ನಿರಾಣಿ, ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಮಾಹಾ ಸಚಿವ ರಾಧಾಕೃಷ್ಣ ವಿ.ಕೆ. ಪಾಟೀಲ, ಸಂಸದರಾದ ಜೈ ಸಿದ್ದೇಶ್ವರ ಸ್ವಾಮಿ, ಜಿ.ಎಂ. ಸಿದ್ದೇಶ, ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ತೆಂಡೂಲ್ಕರ್, ಈರಣ್ಣ ಕಡಾಡಿ, ಶಾಸಕರಾದ ಆರ್.ವ್ಹಿ.ದೇಶಪಾಂಡೆ ಸವದಿ, ಬಸವರಾಜ ಹೊರಟ್ಟಿ, ಅಭಯ್ ಪಾಟೀಲ, ಶಿವಕುಮಾರ್ ಉದಾಸಿ, ಅನಿಲ ಬೆನಕೆ, ಶ್ರೀಮಂತ ಪಾಟೀಲ, ಅವಾಡೆ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.