ಎಲಬುರ್ಗ

ಡಾ. ಶಿವರಾಜ ಗುರಿಕಾರ ಬೆಂಬಲಿಸಲು ಪಾಟೀಲ್ ಕರೆ

ಡಾ. ಶಿವರಾಜ ಗುರಿಕಾರ ಬೆಂಬಲಿಸಲು ಪಾಟೀಲ್ ಕರೆ

ಯಲಬುರ್ಗಾ 02: ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಗತಿ ಪರ ಚಿಂತಕ ಡಾ. ಶಿವರಾಜ ಗುರಿಕಾರ ರವರನ್ನು ನಾಡಿನ ಅಧ್ಯಾಪಕ ವೃಂದ ಬೆಂಬಲಿಸುವಂತೆ ಕನ್ನಡ ಪರ ಹೋರಾಟಗಾರ ಸ.ಶರಣಪ್ಪ ಪಾಟೀಲ್ ಕರಮುಡಿ ಹೇಳಿದ್ದಾರೆ.  

ಡಾ. ಶಿವರಾಜ ಗುರಿಕಾರ ರವರು ಬಹುಮುಖ ಪ್ರತಿಭೆಯ ಪ್ರತಿರೂಪವಾಗಿದ್ದಾರೆ. ಇವರೊಬ್ಬ ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕಕ್ಕೆ ಏಳು ಕೃತಿಗಳನ್ನು ರಚಿಸಿ ಈ ಭಾಗದ ಉತ್ತಮ ಬರಹಗಾರ ಸಾಹಿತಿಯಾಗಿ ರೂಪುಗೊಂಡಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿಯೇ ನಾಯಕತ್ವ ಗುಣ ಬೆಳೆಸಿ ಉತ್ತಮ ಸಂಘಟನಾ ಚತುರನಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಎಲ್ಲ ರಂಗದ ನಾಯಕರ ಅಧಿಕಾರಿಗಳ ಸಂಘಟನಾಕಾರರ ಸಾಹಿತಿಗಳ ಮತ್ತು ಹೋರಾಟಗಾರರ ಜೊತೆಗೆ ಉತ್ತಮ ಸಂಪರ್ಕ ಹೊಂದಿದ್ದು ಇಂದು ರಾಜ್ಯಾದ್ಯಾಂತ ಅಧ್ಯಾಪಕ ವೃಂದ ಹಲವಾರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಧ್ಯಾಪಕ ವೃಂದದ ಎಲ್ಲಾ ಸಮಸ್ಯೆಗಳನ್ನು ಸವಾಲುಗಳನ್ನು ಗುರಿಕಾರ ರವರು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಅಧ್ಯಾಪಕರ ಆಶಿರ್ವಾದದೊಂದಿಗೆ ಇಡೀ ರಾಜಾದ್ಯಂತ ಪ್ರವಾಸ ಮಾಡಿದ್ದಾರೆ. ಎಲ್ಲಾ ಅಧ್ಯಾಪಕರು ಗುರಿಕಾರರವರನ್ನು ಬೆಂಬಲಿಸುವುದು ಈ ಕಾಲ ಮಾನದ ಆಯ್ಕೆಯಾಗಿದೆ. ಕರ್ನಾಟಕದ ಅಧ್ಯಾಪಕರ ಧ್ವನಿಯಾಗಿ ಅವರಿಗೆ ನ್ಯಾಯ ಕೊಡಿಸುವಲ್ಲಿ ಡಾ. ಶಿವರಾಜ ಗುರಿಕಾರ ರವರು ಸಮರ್ಥರಾಗುತ್ತಾರೆ. ಹೀಗಾಗಿ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ. ಶಿವರಾಜ ಗುರಿಕಾರ ರವರನ್ನು ಬೆಂಬಲಿಸಬೇಕೆಂದು ಕನ್ನಡ ಪರ ಹೋರಾಟಗಾರ ಸ.ಶರಣಪ್ಪ ಪಾಟೀಲ್ ಕರಮುಡಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ. 


ಸುದ್ದಿ ಓದಿ