ಮಹಲಿಂಗಪುರ

ಸೋಲಿನಲ್ಲೂ ಗೆಲುವು ಕಂಡ ಡಾ.ಪದ್ಮಜೀತ ನಾಡಗೌಡ ಪಾಟೀಲ

ಸೋಲಿನಲ್ಲೂ ಗೆಲುವು ಕಂಡ ಡಾ.ಪದ್ಮಜೀತ ನಾಡಗೌಡ ಪಾಟೀಲ

ಮಹಾಲಿಂಗಪುರ: ಹಾರ ಮೇ ಭೀ ಜೀತ ಗಯಾ ಅಂದರೆ ಸೋಲಿನಲ್ಲೂ ಗೆಲುವು ಕಂಡ ಡಾ.ಪದ್ಮಜೀತ ನಾಡಗೌಡ ಪಾಟೀಲ ಅದು ಹೇಗೆ ಅಂತಿರಾ.ನಿಜವಾಗ್ಲೂ ಹೇಳಬೇಕೆಂದರೆ ತೇರದಾಳ ಮತ ಕ್ಷೇತ್ರದ ತುಂಬೆಲ್ಲ 2023ರ ಈ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ, ಏನೋ ಗೊತ್ತಿಲ್ಲಾ ನಾನು ಸಾರ್ವಜನಿಕರ ಅನುಕಂಪ ಅಂತಲೇ ಕರೆಯುತ್ತೇನೆ ಅದು ವೈದ್ಯರಾದ ಸಜ್ಜನ ರಾಜಕಾರಣಿ ಡಾ.ಪದ್ಮಜೀತ ನಾಡಗೌಡ ಪಾಟೀಲರ ಮೇಲಿತ್ತು.ಕಳೆದ ಕೆಲ ವರ್ಷಗಳಿಂದ ಮತ್ತು ಕೊರೊನಾ ಸಮಯದಲ್ಲೂ ಸಹ ತಮ್ಮ ಫೌಂಡೇಶನ್ ನಿಂದ ಬಡ ಮತ್ತು ತೊಂದರೆಗೆ ಒಳಗಾದ ಜನತೆಗೆ ಲಕ್ಷಾಂತರ ಹಣ ವ್ಯಯಿಸಿ ಅವರ ನೆರವಿಗೆ ಬಂದಿದ್ದ್ರು. ಉಚಿತ ಕಣ್ಣಿನ ಆಪರೇಶನ್, ಅಂಬ್ಯುಲೆನ್ಸ್ ಸೇವೆ, ಪಿಂಚಣಿ, ರೇಷನ್ ಕಾಡರ್್, ಉತಾರ ಸೇರಿದಂತೆ ಎಲ್ಲ ಬಗೆಯ ಕಾಗದ ಪತ್ರಗಳನ್ನು ಒದಗಿಸುವುದು ಒಂದೆ ಎರಡೆ ನೂರಾರು ಉಚಿತ ಕೆಲಸ ಕಾರ್ಯಗಳನ್ನು ಪಾಟೀಲ್ ರು ಮಾಡಿದ್ದು ಜನರು ಮರೆತಿಲ್ಲ. ಕ್ಷೇತ್ರದ ತುಂಬಾ ಇವರು ಮಾಡಿರುವ ಕಾರ್ಯಗಳ ಬಗ್ಗೆಯೇ ಗುಣಗಾನ ಈಗಲೂ ಇದೆ. 

ಕ್ಷೇತ್ರದ ಶಾಲೆ, ಕಾಲೇಜು, ಜಾತ್ರೆ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಧಾರಾಳವಾಗಿ ಹಣ ನೀಡಿ ಯುವ ಪಡೆ ಸೇರಿದಂತೆ ಪ್ರತಿಯೊಬ್ಬರ ಹೃದಯ ರಾಜರಾಗಿದ್ದರು. ಅವರು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದು ಕೊನೆಯ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತು. ಧೃತಿಗೆಡದೆ ಕ್ಷೇತ್ರದಲ್ಲಿ ತಾವು ಮಾಡಿರುವಂತಹ ಪರೋಪಕಾರ ಕೆಲಸಗಳನ್ನು ಜನತೆಗೆ ತಿಳಿಸಿ ಚುನಾವಣೆ ಎದುರಿಸಿ ಸೇವೆ ಮಾಡೋಣ ಎಂದು ಅಖಾಡದಲ್ಲಿ ಧುಮುಕಿದರು. 

ಕಾಂಗ್ರೆಸ್/ಬಿಜೆಪಿ ರಾಷ್ಟ್ರೀಯ ಪಕ್ಷಗಳು ತಮ್ಮದೇ ಮತ ಮೂಲಗಳನ್ನು ಹೊಂದಿವೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.ಇದಕ್ಕೆ ಮಿಗಿಲಾಗಿ ಕಾಂಗ್ರೆಸ್ ಅಭ್ಯಥರ್ಿ ಸಿದ್ದು ಕೊಣ್ಣೂರ ಕ್ಷೇತ್ರದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ಕೆಲವೆ ವರ್ಷಗಳಲ್ಲಿ ಜನಪ್ರಿಯತೆ ಹೊಂದಿದರು. ಶಾಸಕ ಸಿದ್ದು ಸವದಿ ಆಡಳಿತ (ಭಾಜಪ) ಪಕ್ಷದ ಮತ್ತು ಸೋಲರಿಯದ ಸದರ್ಾರ್. ಇವರನ್ನೆಲ್ಲ ಎದುರಿಸಿ ಚುನಾವಣೆ ಮಾಡುವುದೆಂದರೆ ಸುಲಭದ ಮಾತಲ್ಲ. ಛಲದಂಕ ಮಲ್ಲನಂತೆ ಹೋರಾಟ ಮಾಡಿದ ವೈದ್ಯರ ಸಾಹಸ ರಾಷ್ಟ್ರೀಯ ಎರಡೂ ಪಕ್ಷಗಳ ಅಭ್ಯಥರ್ಿಗಳ ನಿದ್ದೆಗೆಡಿಸಿದಂತೂ ನಿಜ.ಕ್ಷೇತ್ರದಲ್ಲಿ ಏಕಲವ್ಯ ತರಹ ತಮಗೆ ಸಿಕ್ಕ ಪಕ್ಷೇತರ ಚಿಹ್ನೆ 'ಹಣ್ಣಿನ ಬುಟ್ಟಿ' ಗೆ ಮತ ಪ್ರಚಾರ ಆರಂಭಿಸಿದ ಇವರಿಗೆ ಎಲ್ಲ ವರ್ಗಗಳ ಸಕಾರಾತ್ಮಕ ಸ್ಪಂದನೆ ಸಿಗಲಾರಂಭಿಸಿತು. ಇಲ್ಲಿ ಒಂದು ಋಣಾತ್ಮಕ ಅಂಶವೇನೆಂದರೆ ಬೂತ್ ಮಟ್ಟದಲ್ಲಿ ಈ ಜನತೆಯ ಮನೋಭಿಲಾಷೆಯನ್ನು ಅರಿತು ತಮಗೆ ಮತಗಳನ್ನಾಗಿ ಪರಿವತರ್ಿಸುವ ಕಾರ್ಯಕರ್ತರ ಪಡೆಯ ಕೊರತೆಯಿಂದಾಗಿ ಗೆಲುವು ಮರಿಚಿಕೆ ಯಾದರೂ 22,263 ಮತಗಳನ್ನು ಪಡೆದು ತಮ್ಮ ಸಾಮಥ್ರ್ಯವನ್ನು ಇತರೆ ಪಕ್ಷಗಳಿಗೆ ಸಾಬೀತು ಮಾಡಿದ್ದಾರೆ. ಪೂರ್ವದಲ್ಲಿ ಒಂದೆ (ಕಾಂಗ್ರೆಸ್) ಪಕ್ಷದಲ್ಲಿದ್ದು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಬಂಡಾಯ ಅಭ್ಯಥರ್ಿಯಾಗಿ ಸ್ಪಧರ್ಿಸಿ ಕಾಂಗ್ರೆಸ್ ಪಕ್ಷದ ಸೋಲಿನಲ್ಲಿ ಮತ್ತು ಭಾಜಪದ ಶಾಸಕ ಸಿದ್ದು ಸವದಿ ಅಂತರದ ಜಯ ಪಡೆಯುವುದಕ್ಕೂ ತಡೆ ಒಡ್ಡಿದ್ದು ಡಾ.ಪದ್ಮಜೀತ ಕಾರಣಿಭೂತರು ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕೆಲ್ಲ ಸಹಕಾರ ನೀಡಿರುವುದು ಡಾ.ಎ ಆರ್. ಬೆಳಗಲಿ ಅವರು. ಸೋಲು ಗೆಲುವಿಗೆ ಸೋಪಾನ ಇದೆ ರೀತಿಯ ವೈದ್ಯರ ಸೇವೆ ಮುಂದುವರಿದರೆ ಮುಂದೊಂದು ದಿನ ಗೆಲುವು ಖಚಿತ.


ಸುದ್ದಿ ಓದಿ