ಕಾಗವಾಡ

ವ್ಯಸನಮುಕ್ತಿ ಮತ್ತು ಮನೋಚಿಕಿತ್ಸೆಯಲ್ಲಿ ಡಾ. ಚಂದ್ರಶೇಖರ ಹಳಿಂಗಳೆ ಕಾರ್ಯ ಶ್ಲಾಘನೀಯ

ವ್ಯಸನಮುಕ್ತಿ ಮತ್ತು ಮನೋಚಿಕಿತ್ಸೆಯಲ್ಲಿ ಡಾ. ಚಂದ್ರಶೇಖರ  ಹಳಿಂಗಳೆ ಕಾರ್ಯ ಶ್ಲಾಘನೀಯ

ಲೋಕದರ್ಶನ ವರದಿ 

ಕಾಗವಾಡ 03 : ಕರ್ನಾಟಕ ಮತ್ತು ಮಹರಾಷ್ಟ್ರದ ಗಡಿ ಭಾಗದಲ್ಲಿ ವ್ಯಸಮುಕ್ತ ಸಮಾಜ ನಿರ್ಮಾಣ ಮತ್ತು ಮನೋವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಡಾ. ಚಂದ್ರಶೇಖರ ಹಳಿಂಗಳೆ ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಎಂಡಿ ಮೆಡಿಸನ್ ಮತ್ತು ಕನ್ಸಲ್ಟಂಟ್ ಫಿಜಿಸಿಯನ್ ಡಾ. ಅಶೋಕ ಕುಲಕರ್ಣಿ ತಿಳಿಸಿದ್ದಾರೆ. 

ಅವರು, ಶನಿವಾರ ದಿ. 01 ರಂದು ಮಹಾರಾಷ್ಟ್ರದ ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ, ವ್ಯಸಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ನೂತನ ಕಟ್ಟಡ ಮತ್ತು ಅತ್ಯಾಧುನಿಕ ಐಸಿಯು ಘಟಕವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ನೂತನ ಕಟ್ಟಡ, ಅತ್ಯಾಧುನಿಕ ಐಸಿಯು ನಿರ್ಮಲ ಆಸ್ಪತ್ರೆಯ ಆರೋಗ್ಯ ಸೇವೆಗೆ ಮತ್ತೊಂದು ಹೊಸ ಮೈಲಿಗಲ್ಲಾಗಿದ್ದು, ಇದರಿಂದ ರೋಗಿಗಳಿಗೆ ಹೆಚ್ಚು ಪರಿಣಾಮಕಾರಿ ಆರೈಕೆ ನೀಡುವಲ್ಲಿ ಸಹಕಾರಿಯಾಗಲಿದೆ ಎಂದರು. 

ನಿರ್ಮಲ ಆಸ್ಪತ್ರೆಯ ಸಂಸ್ಥಾಪಕ ಡಾ. ಚಂದ್ರಶೇಖರ ಹಳಿಂಗಳೆ ಮಾತನಾಡಿ, ರೋಗಿಗಳಿಗೆ ಸುರಕ್ಷಿತ, ವೇಗದ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಅತ್ಯಾಧುನಿಕ ಐಸಿಯು ವಿಭಾಗವನ್ನು ಹೊಸ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ. 

ಗಂಭೀರ ಮತ್ತು ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳಿಗೆ ಅಗತ್ಯ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಒದಗಿಸಲು ಈ ವಿಭಾಗವನ್ನು ರಚಿಸಲಾಗಿದ್ದು, ನಿರ್ಮಲ ಆಸ್ಪತ್ರೆಯ ರೋಗಿಗಳ ಸೇವೆಗಳನ್ನು ವಿಸ್ತರಿಸುವುದರ ಜೊತೆಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಸೂಕ್ಷ್ಮ ರೋಗಿಗಳ ಆರೈಕೆಯನ್ನು ಸಂಯೋಜಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು. 

ಈ ವೇಳೆ ನಿರ್ಮಲ ಆಸ್ಪತ್ರೆಯ ಸಂಸ್ಥಾಪಕ ಡಾ. ಚಂದ್ರಶೇಖರ ಹಳಿಂಗೆಳೆ, ಜಂಟಿ ನಿರ್ದೇಶಕಿ ಡಾ. ನಿಶಾ ಹಳಿಂಗಳೆ ಸೇರಿದಂತೆ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು. ನಿರ್ಮಲ ಆಸ್ಪತ್ರೆಯ ನೂತನ ಕಟ್ಟಡ ಮತ್ತು ಐಸಿಯು ವಿಭಾಗವನ್ನು  ಉದ್ಘಾಟಿಸುತ್ತಿರುವ ಡಾ. ಅಶೋಕ ಕುಲಕರ್ಣಿ, ಡಾ.  ಚಂದ್ರಶೇಖರ ಹಳಿಂಗಳೆ,  ಡಾ. ನಿಶಾ ಹಳಿಂಗಳೆ ಇದ್ದರು. 


ಸುದ್ದಿ ಓದಿ