ಮಹಲಿಂಗಪುರ

ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ ಜನ್ಮ ದಿನಾಚರಣೆ

ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ ಜನ್ಮ ದಿನಾಚರಣೆ
ಪುರಸಭೆಯಲ್ಲಿ 114ನೇ ಜಯಂತಿ ನಿಮಿತ್ತವಾಗಿ ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿಯವರು ಡಾ.ಬಾಬು ಜಗಜೀವನರಾಮ

ಮಹಾಲಿಂಗಪುರ 06: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಬಡವರ ಹಾಗೂ ಶೋಷಿತರ  ಧ್ವನಿಯಾಗಿದ್ದರಲ್ಲದೆ ಹಸಿರು ಕ್ರಾಂತಿಯ ಹರಿಕಾರರೂ ಆಗಿದ್ದರು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿ ಹೇಳಿದರು.

ಏಪ್ರಿಲ್ 5ರಂದು ಪುರಸಭೆಯಲ್ಲಿ ಭಕ್ತಿಪೂರ್ವಕ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾದ ಡಾ.ಬಾಬು ಜಗಜೀವನರಾಮ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಭಾರತದ ಉಪ ಪ್ರಧಾನಿಗಳಾಗಿ ಹಿಂದೂಳಿದ, ಶೋಷಿತ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ತತ್ವದೊಂದಿಗೆ ಜನಮೆಚ್ಚುಗೆಯ ನಾಯಕರಾಗಿದ್ದರು.ಇಂಥ ಮಹಾನ್ ನಾಯಕರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡಲ್ಲಿ ದೇಶದ ಅಭಿವೃದ್ಧಿ ಸುಲಲಿತವಾಗಲು ಸಾಧ್ಯವೆಂದರು.

ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಯಲ್ಲನಗೌಡ ಪಾಟೀಲ, ಪ್ರಲ್ಹಾದ ಸಣ್ಣಕ್ಕಿ, ಜಾವೇದ ಭಾಗವಾನ, ಬಲವಂತಗೌಡ ಪಾಟೀಲ ಹಾಗೂ ಧುರೀಣರಾದ ವಿರುಪಾಕ್ಷ ಬಾಟ್, ಲಕ್ಷ್ಮಣ್ ಮಾಂಗ, ಅರ್ಜುನ ದೊಡಮನಿ, ನಾಗೇಶ ನಾಯಕ, ನಾಮದೇವ ಮಾಣಿ,ಶಿವಬಸು ಗೌಂಡಿ, ಪುರಸಭೆಯ ಸಿಬ್ಬಂದಿಗಳಾದ ರಾಘು ನಡುವಿನಮನಿ, ವ್ಹಿ.ಜಿ ಕುಲಕರ್ಣಿ, ಡಿ.ಬಿ ಪಠಾಣ, ಬಿ.ವಾಯ್ ಮರ್ಧಿ,ರಾಜು ಹೂಗಾರ, ರವಿ ಹಲಸಪ್ಪಗೋಳ, ಪ್ರಶಾಂತ ಮುಖ್ಖೇನ್ನವರ, ಎಂ.ಡಿ ಆನಂದ, ಸಿದ್ದು ಅಳ್ಳಿಮಟ್ಟಿ, ರಾಮು ಮಾಂಗ ಸೇರಿದಂತೆ ಹಲವರು ಇದ್ದರು. 



ಸುದ್ದಿ ಓದಿ