ಡಾ. ಬಿ.ಆರ್. ಅಂಬೇಡ್ಕಯವರ ಮಹಾಪರಿ ನಿರ್ವಾಣ ದಿನ
ಮಹಾಲಿಂಗಪುರ07 : ಸಮೀಪದ ರನ್ನ ಬೆಳಗಲಿ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯುಕ್ತಾಶ್ರಯದಲ್ಲಿ, ಪಟ್ಟಣದ ಗಣ್ಯರು ಭಾರತ ರತ್ನ ಹಾಗೂ ಸಂವಿಧಾನ ನಿರ್ಮಾತೃ ಡಾ. ಬಿ.ಆರ್. ಅಂಬೇಡ್ಕರ 65 ನೇಯ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ 35ನೇಯ ಮಹಾಪರಿ ನಿರ್ವಾಣ ದಿನವನ್ನು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಹಾಗೂ ಮೊಂಬತ್ತಿ ಬೆಳಗಿಸುವ ಮೂಲಕ ಆಚರಿಸಿದರು.