ಮಹಲಿಂಗಪುರ

ರಕ್ತ ನೀಡಿ ಮರು ಜೀವಕ್ಕೆ ವರದಾನವಾಗಿ: ಶಾಸಕ ಸಿದ್ದು ಸವದಿ.

ರಕ್ತ ನೀಡಿ ಮರು ಜೀವಕ್ಕೆ ವರದಾನವಾಗಿ: ಶಾಸಕ ಸಿದ್ದು ಸವದಿ.

ಲೋಕದರ್ಶನ ವರದಿ 

ರಕ್ತ ನೀಡಿ ಮರು ಜೀವಕ್ಕೆ ವರದಾನವಾಗಿ: ಶಾಸಕ ಸಿದ್ದು ಸವದಿ. 

ಮಹಾಲಿಂಗಪುರ  06:   ರಕ್ತದಾನ ಮಾಡುವುದರಿಂದ ಅನೇಕ ಜನರ ಮರು ಜೀವಕ್ಕೆ ಕಾರಣರಾಗುತ್ತೇವೆ. ಹಿಂಜರಿಯದೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ತುರ್ತು ಸಂದರ್ಭದಲ್ಲಿರುವ ಜೀವಕ್ಕೆ ವರದಾನವಾಗಿ. ಈ ಶಿಬಿರದ ಜೊತೆಗೆ ಕ್ರೀಡೆ, ಸಸಿ ನೆಡುವುದು, ಬಡ ರೋಗಿಗಳಿಗೆ ಹಣ್ಣು ಹಂಪಲು ನೀಡುವುದು, ಹೀಗೆ ಸಮಾಜಕ್ಕೆ ಒಳಿತಾಗುವ ಕಾರ್ಯಕ್ರಮಗಳನ್ನು ಮಾಡುವುದು ಉತ್ತಮ. ಸ್ವಾತಂತ್ರ್ಯಕ್ಕಾಗಿ ರಕ್ತ ಹರಿಸಿದ ಭಗತ್ ಸಿಂಗ್ ಹಾಗೂ ನಮ್ಮ ದೇಶವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರ ಹೆಸರಿನಲ್ಲಿ ಮಾಡುವ ಕಾರ್ಯಕ್ರಮ ವಿಕಸಿತ ಭಾರತಕ್ಕೆ ಒಂದು ಹೆಜ್ಜೆಯಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. 

ಸ್ಥಳೀಯ ಟೋನಪಿನಾಥ ಸಭಾಭವನದಲ್ಲಿ ಸೋಮವಾರ ನಡೆದ ಭಾರತೀಯ ಜನತಾ ಪಕ್ಷ ತೇರದಾಳ ಮತಕ್ಷೇತ್ರ, ಬಿಜೆಪಿ ನಗರ ಘಟಕ ಮಹಾಲಿಂಗಪುರ ಹಾಗೂ ಸೈದಾಪುರ ಜಿಲ್ಲಾ ಪಂಚಾಯತ್ ವತಿಯಿಂದ ಕ್ರಾಂತಿಕಾರಿ ಭಗತ್ ಸಿಂಗ್ ರವರ 118ನೇ ಜನ್ಮದಿನ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75 ಜನ್ಮದಿನದ ಪ್ರಯುಕ್ತ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಾಜಿ ಜಿ ಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ ಮತ್ತು ಬಿಜೆಪಿ ನೇಕಾರರ ಮುಖಂಡ ಮನೋಹರ ಶಿರೋಳ ಮಾತನಾಡಿ ಇದು ಪಕ್ಷದ ಪ್ರಚಾರಕ್ಕಾಗಿ ಅಲ್ಲ, ಸಮಾಜ ಸೇವೆಗೆ ಮತ್ತು ಪ್ರೇರಣೆಗಾಗಿ ಈ ಶಿಬಿರವಿದ್ದು,ಅನೇಕರ ಮರುಜೀವಕ್ಕೆ ಕಾರಣವಾಗಿದೆ.ಜೊತೆಗೆ ನಾವೆಲ್ಲರೂ ದೇಶ ಸೇವೆಯಲ್ಲಿ ತೊಡಗೋಣ ಎಂದರು. 

ಈ ಶಿಬಿರದಲ್ಲಿ ಹಿರಿಯ ಮುಖಂಡರು,ಯುವ ಕಾರ್ಯಕರ್ತರು,ವಿದ್ಯಾರ್ಥಿಗಳು ಭಾಗಿಯಾಗಿ 70ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಕಪ್ಪ ಪಾಟೀಲ,ಪುರಸಭೆ ಸದಸ್ಯ ಶೇಖರ ಅಂಗಡಿ, ಸಂಗಾನಟ್ಟಿ ಗ್ರಾ.ಪಂ ಅಧ್ಯಕ್ಷ ಬಸವರಾಜ ನಾಗನೂರ, ಬೆಳಗಲಿ ಪ.ಪಂ. ಸದಸ್ಯ ಸಿದ್ದುಗೌಡ ಪಾಟೀಲ, ನಗರ ಬಿಜೆಪಿ ಮುಖಂಡರಾದ ಅಶೋಕಗೌಡ ಪಾಟೀಲ, ಈರ​‍್ಪ ದಿನ್ನಿಮನಿ, ಮಹಾಲಿಂಗಪ್ಪ ಲಾತುರ, ಚಂದ್ರಶೇಖರ ಗೊಂದಿ, ರಮೇಶ ಕೆಸರಗೊಪ್ಪ, ಮುದುಕಪ್ಪ ಗುರವ, ವಿನೋದ ಉಳ್ಳಾಗಡಿ, ಅಶೋಕ ದಿನ್ನಿಮನಿ, ಪ್ರಕಾಶ ಅರಳಿಕಟ್ಟಿ,ಹನಮಂತ ಜಮಾದಾರ, ಶಿವಾನಂದ ಅಂಗಡಿ, ಸಂಜು ಬಾರಕೋಲ,ಸಿದ್ದಪ್ಪ ಶಿರೋಳ, ಅರ್ಜುನ ಮೋಪಗಾರ, ಪ್ರಕಾಶ ಕೊಳ್ಳಿಗುಡ್ಡ, ವಿಷ್ಟುಗೌಡ ಪಾಟೀಲ, ಮುತ್ತಪ್ಪ ದಲಾಲ, ಮಲ್ಲಪ್ಪ ದಲಾಲ, ಚೆನ್ನಪ್ಪ ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ,ಮಹೇಶ ಜಿಡ್ಡಿಮನಿ,ಮಹಾಲಿಂಗಪ್ಪ ಕಂಠಿ,ಮಹಾಲಿಂಗ ಬುದ್ನಿ, ಬಸವರಾಜ ಹುಕ್ಕೇರಿ, ಶಿವಬಸು ಗೌಂಡಿ, ಗುರು ಜಂಬಗಿ, ರವಿ ಮುಂಡಗನೂರ, ಸಂತೋಷ ಭಜಂತ್ರಿ, ಚೇತನ ಬಂಡಿವಡ್ಡರ,ಬಸು ಮಡಿವಾಳ,ಆನಂದ ಪವಾರ, ಹಣಮಂತ ಯರಗಟ್ಟಿ,ನಾಗಪ್ಪ ಖೋತ,ವೀರೇಶ ಮುಂಡಗನೂರ, ರಮೇಶ ಭಾವಿಕಟ್ಟಿ, ಮಹೇಶ ಚಿಂಚಲಿ, ಮಲ್ಲಪ್ಪಾ ಕೌಜಲಗಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಸಿದ್ದರು. ಜಿ.ಎಸ್‌.ಗೊಂಬಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ