ಎಫ್ ಬಿ ಐ ವಿರುದ್ದ ಡೊನಾಲ್ಡ್ ಟ್ರಂಪ್ ಆಕ್ರೋಶ
ವಾಷಿಂಗ್ಟನ್,
ನವೆಂಬರ್ 30: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿರುವ ರಿಪಬ್ಲಿಕನ್
ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಅಸಹನೆ
ಹೊರಹಾಕುವುದನ್ನು ಮುಂದುವರಿಸಿದ್ದಾರೆ.
ಅಮೆರಿಕಾ
ಗುಪ್ತಚರ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿ ಐ) ವಿರುದ್ದವೂ ಅವರ ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ, ಮತಗಳ ಎಣಿಕೆಯಲ್ಲಿ ಬದಲಾವಣೆ ನಡೆದಿವೆ, ಹಾಗಾಗಿ ಫಲಿತಾಂಶ ಏರಪೇರಾಗಿದ್ದು, ತಮಗೆ ಅನ್ಯಾಯವಾಗಿದೆ ಎಂದು ಟ್ರಂಪ್ ಆರೋಪಿಸುತ್ತಿದ್ದಾರೆ. ಅವರ ಬೆಂಬಲಿಗರು ಕಾನೂನು ಹೋರಾಟ ನಡೆಸುತ್ತಿದ್ದಾರೆ.
ತಮ್ಮ ವಾದವನ್ನು ಬೆಂಬಲಿಸಿ ಎಫ್ ಐ ಬಿ ಕನಿಷ್ಟ ಒಂದು ಹೇಳಿಕೆಯನ್ನು ಸಹ ನೀಡಲಿಲ್ಲ ಎಂದು ಟ್ರಂಪ್ ಆಕ್ಷೇಪಿಸಿದ್ದಾರೆ. ಎಫ್ ಬಿ ಐ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡಿದೆ ಎಂದು ಅವರು ಭಾನುವಾರ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಎಫ್ ಬಿ ಐ ನಲ್ಲಿ ಕೆಲವರು ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.