ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಹಣ ನೀಡಬೇಡಿ : ಪಪಂ ಮುಖ್ಯಾಧಿಕಾರಿ ನಾಗೇಶ್
ಲೋಕದರ್ಶನ ವರದಿ
ಯಲಬುರ್ಗಾ 28: ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗೊಳಿ ಸಿದ್ದು, ಇದರ ಸದುಪಯೋಗವನ್ನು ಮಹಿಳೆಯರು ಪಡೆಯಬೇಕು ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ತಿಳಿಸಿದರು.ಪಟ್ಟಣದಲ್ಲಿ ಈ ಕುರಿತು ಪತ್ರಿಕೆಯೊಂದಿಗೆ ಗುರುವಾರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ನೋಂದಣಿಗಾಗಿ ಸರ್ಕಾರದಿಂದ ಪಟ್ಟಣದಲ್ಲಿ ಮೂರು ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ಪಪಂ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ಒನ್ ಕೇಂದ್ರದಲ್ಲಿ ಉಚಿತವಾಗಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.ಮಹಿಳೆಯರು ಯಾವುದೇ ಶುಲ್ಕ ಪಾವತಿಸದೆ ಉಚಿತವಾಗಿ ಗೃಹಲಕ್ಷ್ಮೀ ಯೋಜನೆಗೆ ಹೆಸರು ನೋಂದಾಯಿಸುವಂತೆ ತಿಳಿಸಿದ್ದಾರೆ.ಯಾರಾದರೂ ಹಣ ಕೇಳಿದರೆ ತಕ್ಷಣವೇ ನಮಗೆ ದೂರು ನೀಡಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.