ಕೊವೀಡ್ ಕೇರ್ ಸೆಂಟರ್‌ಗೆ ಜಿಲ್ಲಾಧಿಕಾರಿ ಭೇಟಿ
ರಾಮದುರ್ಗ 02: ಕೊರೊನಾ ಸೋಂಕಿತರು ಭಯಪಡುವ ಅಗತ್ಯತೆ ಇಲ್ಲ. ಜನತೆಯ ಆರೋಗ್ಯ ರಕ್ಷಣೆಗೆ ಜಿಲ್ಲಾಡಳಿತ ಬದ್ಧವಿದ್ದು, ಪಾಸಿಟಿವ್ ಆದವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮನೆಯಲ್ಲಿರುವ ಇತರರ ಆರೋಗ್ಯದ ಮೇಲು ವ್ಯತೀರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಅರಿತು ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಈ. ಹಿರೇಮಠ ಸೊಂಕಿತರಿಗೆ ಅಭಯ ನೀಡಿದರು.
ಕೊವೀಡ್-19 ಪರಸ್ಥಿತಿ ವೀಕ್ಷಣೆಗೆ ಮಂಗಳವಾರ ರಾಮದುರ್ಗ ತಾಲೂಕಿಗೆ ಆಗಮಿಸಿದ ಅವರು ತುರನೂರ ಸಮೀಪದ ಬಿಸಿಎಂ ವಸತಿ ನಿಲಯದಲ್ಲಿ ಸ್ಥಾಪಿಸಿದ ಕೊವೀಡ್ ಕೇರ್ ಸೆಂಟರನಲ್ಲಿ ಸೊಂಕಿತರೊಂದಿಗೆ ಸಂವಾರ ನಡೆಸಿ, ಇತ್ತಿಚೆಗೆ ಕೊವೀಡ್‌ನಿಂದ ಮೃತಪಟ್ಟ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ಎಸ್. ಕರ್ಕಿ ಅವರ ಮನೆಗೆ ಬೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಸುನ್ನಾಳ, ಚುಂಚನೂರ, ಕಟಕೋಳ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಕೊವೀಡ್ ನಿಯಂತ್ರಣಕ್ಕೆ ತಾಲೂಕಾಡಳಿತ ಕೈಗೊಂಡ ಕ್ರಮಗಳ ಕುರಿತು ಪರೀಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಒಂದು ಸಾವಿರ ಹಳ್ಳಿಗಳಿಗೆ ವೈಧ್ಯರ ತಂಡ ಬೇಟಿ ನೀಡಿ ತಪಾಸಣೆ ಮಾಡಿದಾಗ 700 ಪಾಸಿಟಿವ್ ಕೇಸ್ ಬಂದಿದ್ದು, ಸೊಂಕಿನ ಪ್ರಮಾಣ ಶೇಕಡಾ 11ಕ್ಕೆ ಇಳಿಕೆಯಾಗಿದೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ 50 ಬೆಡ್‌ಗಳು ಖಾಲಿ ಇವೆ. ಜಿಲ್ಲೆಯಾಧ್ಯಂತ 40 ಬ್ಲಾಕ್ ಪಂಗಸ್ ಪ್ರಕರಣಗಳು ಪತ್ತೆಯಾಗಿದ್ದು, 10 ಜನರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಕೊವೀಡ್ ನಿಯಂತ್ರಣಕ್ಕೆ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊವೀಡ್ ಕೇರ್ ಸೆಂಟರ್ ತೆರೆಯಲು ಅನುಮತಿ ನೀಡಲಾಗಿದೆ. ಅವಶ್ಯವಿದ್ದಲ್ಲಿ ಅಧಿಕಾರಿಗಳು ಕೊವೀಡ್ ಕೇರ್ ಸೆಂಟರ್ ಪ್ರಾರಂಭಿಸಿ ಜನತೆಯ ಸೇವೆ ಮಾಡಬೇಕು. ನಾಗರಿಕರು ಸರಕಾರ ಜಾರಿಗೊಳಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ತಾಲೂಕಾಡಳಿತದ ನೇತೃತ್ವದಲ್ಲಿ ಕೊವೀಡ್ ಕೇರ್ ಸೆಂಟರನಲ್ಲಿ ಸೊಂಕಿತರಿಗೆ ಗುಣಮಟ್ಟದ ಊಟ, ವಸತಿ, ಓಷಧೋಪಚಾರ ಮಾಡಲಾಗುತ್ತಿದ್ದು, ಅವರ ಯೋಗಕ್ಷೇಮ ನೋಡಿಕೊಳ್ಳಲು ವೈಧ್ಯರು ಹಾಗೂ ದಾದಿಯರು ಸೇವೆಯಲ್ಲಿದ್ದಾರೆ. ಒಂದು ವೇಳೆ ಕೊವೀಡ್ ಕೇರ್ ಸೆಂಟರನಲ್ಲಿ ಆರೋಗ್ಯ ಏರುಪೇರಾದಲ್ಲಿ ಸಕಲ ವ್ಯವಸ್ಥೆಯನ್ನು ಹೊಂದಿದ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಗೊಳಿಸಿ ಚಿಕಿತ್ಸೆ ನೀಡಲಾಗುವುದು ಎಂದರು.
ಸೇವೆಗೆ ಬಾರದ ವೈದ್ಯರು ಜಿಲ್ಲಾಧಿಕಾರಿ ಬೇಸರಃ
ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ವೈಧ್ಯರೇ ಮುಂದೆ ಬರುತ್ತಿಲ್ಲ. ಇರುವ ಸಿಬ್ಬಂದಿಯನ್ನೇ ಬಳಕೆ ಮಾಡಿಕೊಂಡು ಕೊವೀಡ್ ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ. ಯಾರೇ ವೈಧ್ಯರು ಸೇವೆಗೆ ಬರುತ್ತಿದ್ದರೆ ಹೇಳಿ ಈಗಲೇ ನೇಮಕಾತಿ ಆದೇಶ ನೀಡುತ್ತೇನೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ವೈಧ್ಯರು ಮುಂದಾಗದೇ ಇರುವ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಎಸಿ ಶಶಿಧರ ಬಗಲಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾ.ಪಂ ಇಓ ಮುರುಳಿಧರ ದೇಶಪಾಂಡೆ, ಟಿಎಚ್‌ಓ ಡಾ. ಮೃತ್ಯುಂಜಯ ತಡಹಾಳ, ಪುರಸಭೆ ಮುಖ್ಯಾಧಿಕಾರಿ ಎಸ್.ಜಿ. ಅಂಬಿಗೇರ ಜಿ.ಪಂ ಸದಸ್ಯ ಮಾರುತಿ ತುಪ್ಪದ, ಮುಖಂಡರಾದ ವೈ.ಎಚ್. ಪಾಟೀಲ, ಬಿ.ಎಂ ಪಾಟೀಲ, ಬಿ.ಎಫ್. ಬಸಿಡೋಣಿ ಸೇರಿದಂತೆ ಇತರರಿದ್ದರು.