ಮಳೆಯಿಂದ ಹಾನಿಯಾದ ಭತ್ತದ ಗದ್ದೆಗಳಿಗೆ ಜಿಲ್ಲಾಧಿಕಾರಿ ಪರೀಶೀಲನೆ
ಸಿರುಗುಪ್ಪ 22: ಬಳ್ಳಾರಿ ಜಿಲ್ಲಾಧಿಕಾರಿ ತಾಲ್ಲೂಕಿನ ಶಾನವಾಸಪುರ ಭೈರಾಪುರ ದೇವಿನಗರ ತೆಕ್ಕಲಕೋಟೆ ಚಾಣಕನೂರು ಮುಂತಾದ ಗ್ರಾಮದ ರೈತರ ಜಮೀನುಗಳಿಗೆ ಮಳೆಯಿಂದ ಹಾನಿಯಾದ ಭತ್ತದ ಗದ್ದೆಗಳನ್ನು ಪರೀಶೀಲನೆ ನಡೆಸಿದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮಾತನಾಡಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ ಕೃಷಿ ತೋಟಗಾರಿಕೆ ಕಂದಾಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಜಂಟಿ ಸಮೀಕ್ಷೆ ಆರಂಭಿಸಿದ್ದಾರೆ ಸರ್ಕಾರದಿಂದ ಪರಿಹಾರ ಒದಗಿಸುವ ಕ್ರಮ ಕೈ ಗೊಳ್ಳಲಾಗುವುದು ರೈತರು ಧೈರ್ಯದಿಂದ ಇರಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಸಹಾಯಕ ಕೃಷಿ ನಿರ್ದೇಶಕ ಎನ್ ನಜೀರ್ ಅಹಮ್ಮದ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ಸಮಾಜ ಸೇವಕ ಅಬ್ದುಲ್ ನಬಿ ಇತರರು ಇದ್ದರು.