ಮಹಲಿಂಗಪುರ

ನೇಕಾರ ಸಮುದಾಯ ಸ್ವಾತಂತ್ರ ಬದುಕು ಸಾಗಿಸುವಂತಾಗಬೇಕು : ಸಿದ್ದು ಸವದಿ

ನೇಕಾರ ಸಮುದಾಯ ಸ್ವಾತಂತ್ರ ಬದುಕು ಸಾಗಿಸುವಂತಾಗಬೇಕು : ಸಿದ್ದು ಸವದಿ

ಕೌಜಲಗಿ ನಿಂಗಮ್ಮ ಭವನದಲ್ಲಿ ನೇಕಾರರ ಗುರುತಿನ ಕಾರ್ಡ್‌ ವಿತರಣೆ 

ಮಹಾಲಿಂಗಪುರ 01: ನಿತ್ಯವೂ ಇಡೀ ಕುಟುಂಬ ತಮ್ಮ ಮನೆಯನ್ನೇ ಉದ್ಯೋಗ ಕೇಂದ್ರವನ್ನಾಗಿಸಿಕೊಂಡು ದುಡಿದು ಪ್ರಾಮಾಣಿಕ ಬದುಕು ನಡೆಸುತ್ತಿರುವ ಸಮುದಾಯ ನೇಕಾರರು ಸ್ವಾತಂತ್ರ ಬದುಕು ನಡೆಸುವಂತಾಗಬೇಕು. ಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು. 

ನಗರದ ಕೌಜಲಗಿ ನಿಂಗಮ್ಮ ಸಾಂಸ್ಕೃತಿಕ ಭವನದಲ್ಲಿ ನಡೆದ ಕೈಮಗ್ಗ ಮತ್ತು ಜವಳಿ ಇಲಾಖೆ ಬಾಗಲಕೋಟ ಹಾಗೂ ಸ್ಥಳಿಯ ನೇಕಾರರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪವರ್ ಲೂಮ್ ಮಗ್ಗಗಳ ನೇಕಾರರಿಗೆ ಗುರುತ್ತಿನ ಕಾರ್ಡ ವಿತ್ತರಣೆ ಕಾರ್ಯಕ್ರಮವನ್ನು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಸಶಿಗೆ ನೀರು ಹಾಕುವ ಮೂಲಕ ಉದ್ಘಾಟಸಿ ಮಾತನಾಡಿದ ನೇಕಾರರು ದಿನವಿಡಿ ದುಡಿದರು ಶ್ರಮಕ್ಕೆ ತಕ್ಕ ಕೂಲಿ ಸಿಗುತ್ತಿಲ್ಲ. ಇದರಿಂದಾಗಿ ಇಂದು ನೇಕಾರಿಕೆ ಕಸಬು ನಶಿಸಿ ಹೋಗುವ ಅಪಾಯ ಎದುರಿಸುತ್ತಿದೆ. 

ಇಂದಿನ ಯುವಕರು ಈ ವೃತ್ತಿ ಮಾಡಲು ಮುಂದೆ ಬರುತ್ತಿಲ್ಲ, ಯುವಕರು ದುಶ್ಚಟಗಳಿಗೆ ದಾಸರಾಗಿ ಮೊಬೈಲ್ ಗಿಳು ಅಂಟಿಸಿಕೊಂಡು ಮೋಜು ಮಸ್ತಿ ಮಾಡುವುದರಲ್ಲೇ ಕಾಲ ಹರಣ ಮಾಡುತ್ತಿದ್ದು, ಅವರು ಬದುಕು ಈ ಕೆಟ್ಟ ವ್ಯವಸ್ಥೆಗೆ ಸೀಮಿತ ಆಗುತ್ತಿರುವುದು ದುರಾದುಷ್ಟ ಈ ಮನಸ್ಥಿತಿಯಿಂದ ಹೊರಬಂದು ದುಡಿದು ತಿನ್ನುವದನ್ನು ಕಲಿತು ಸ್ವಾವಲಂಬನೆ ಬದುಕು ಸಾಗಿಸಿದರೆ ಅವರ ಜೀವನ ಸ್ವಾರ್ಥಕ ಆಗುತ್ತದೆ. ಎಂದು ಹೇಳಿದರು. 

ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಜನ್ಯ ನೇಕಾರ ಸಂಘದ ಅಧ್ಯಕ್ಷರಾದ ಜಿ ಎಸ್ ಗೊಂಬಿ ಮಾತನಾಡಿ ನೇಕಾರಿಕೆ ಉದ್ಯೋಗ ನಿತ್ಯವು ಹೊಸ ಹೊಸ ರೂಪಾಂತರಗೊಳ್ಳುತ್ತಿದ್ದು, ಅದಕ್ಕೆ ಹೊಂದಿಕೊಳ್ಳುವುದು ಕಷ್ಟ ಆಗುತ್ತಿದ್ದು ಆದ್ದರಿಂದ ನೇಕಾರ ಸಮುದಾಯ ಬೇರೆ ಬೇರೆ ಉದ್ಯೋಗ ಕಡೆ ಮುಖ ಮಾಡುತ್ತಿದ್ದು ಆದ್ದರಿಂದ ಈ ಕಸಬು ಇತಿಹಾಸದ ಪುಟ ಸೇರುವ ದಿನಗಳು ದೂರ ಇಲ್ಲ ಅದಕ್ಕಾಗಿ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ ನೇಕಾರಿಕೆ ಉಳಿಸಲು ಉತ್ತೇಜನ ನೀಡಬೇಕು ಎಂದು ಹೇಳಿದರು. 

ನಂತರ ಮಾತನಾಡಿದ ಬಾಗಲಕೋಟ ಜವಳಿ ಇಲಾಖೆಯ ಉಪ ನಿರ್ದೇಶಕರಾದ ಎಂ ಜಿ ಕೊಣ್ಣೂರ ಮಾತನಾಡಿ ಇಲಾಖೆಯ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿದರು ನಗರದಲ್ಲಿರುವ ಸುಮಾರು 250 ನೇಕಾರರಿಗೆ ಗುರುತಿನ ಕಾರ್ಡಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು. 

ಪುರಸಭೆ ಮುಖ್ಯಧಿಕಾರಿ ಈರಣ್ಣ ದಡ್ಡಿ,ಜವಳಿ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ , ಪುರಸಭೆ ಸದಸ್ಯರಾದ ರವಿ ಜವಳಗಿ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ಮುಖಂಡರಾದ ಸಂಗಪ್ಪ ಹಳ್ಳೂರ ಸುರೇಶ ಅಕ್ಕಿವಾಟ್  ಶಿವಾನಂದ ಅಂಗಡಿ, ವಿಷ್ಣು ಪಾಟೀಲ,  ಲಕ್ಕಪ್ಪ ಪಾಟೀಲ,ಶಂಕರ ಹುನ್ನೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು . 

ಈ ಸಂಧರ್ಭದಲ್ಲಿ ಮಹೇಶ ಜಿಡ್ಡಿಮನಿ, ಮಹಾದೇವ ಚಮಕೇರಿ, ವಿಜಯ ಜಗದಾಳ, ಹಣಮಂತ ಜಮಾದಾರ, ಕುಮಾರ ಕುಳಲಿ ಮಲ್ಲಪ್ಪಾ ಮಿರ್ಜಿ, ಶಿವರುದ್ರ​‍್ಪ ಮುಂಡಗನೂರ,ಜಿ ಎಸ್ ಗೊಂಬಿ, ಶಿವಲಿಂಗ ಟಿರ್ಕಿ, ಶಿವಪ್ಪ ಕಲಾದಗಿ, ರಾಜು ಗಲಗಲಿ, ಶಿವಪ್ಪ ಶಿರೋಳ,ಮಹಾಲಿಂಗ ನಡಕಟ್ನಿ, ಮಹಾಲಿಂಗ ಅಂಬಿ, ಶ್ರೀಶೈಲ ಬ್ರಹ್ಮ,ಮಲ್ಲಪ್ಪಾ ನಿಂಬರಗಿ, ಶಿವಬಸು ಗೌಠ ಅಡಿವೆಪ್ಪ ಹುಣಶ್ಯಾಳ, ಮಹಾಲಿಂಗ ಕುಳ್ಳೊಳ್ಳಿ,ನಂದು ಲಾತುರ.ಸುರೇಶ ಮಿರ್ಜಿ, ಅಂಬರೀಷ ಕನ್ನಾಳ, ಶಶಿಕಾಂತ್ ಜಗದಾಳ,ಶಂಕರ ಪಂಕಿ, ಪಂಡಿತ ಪಂಕಿ, ಮಹಾಲಿಂಗ ಧರ್ಮಟ್ಟಿ, ಭಾರತ್ ಕದ್ದಿಮನಿ, ಶಿವಾನಂದ ಕಂಪು, ಶ್ರೀಶೈಲ ಮರೆಗುದ್ದಿ, ಪ್ರಕಾಶ ಬೀಳಕುಂದಿ, ಮಹಾಲಿಂಗ ಶಿರೋಳ,ಮಹಾಲಿಂಗ ಹಲ್ಯಾಳ ಜಮೀರ್ ಯಕಃಸಂಬಿ, ರವಿ ಮುಂಡಗನೂರ,ನಾಗಪ್ಪ ಹುಣಶ್ಯಾಳ, ಬಸವರಾಜ್ ಜಮಖಂಡಿ,ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ನರನಗೌಡ ಉತ್ತಂಗಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ