ರಾಮದುರ್ಗ

ಪ್ರತಿ ವರ್ಷ ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ

ಪ್ರತಿ ವರ್ಷ ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ

ರಾಮದುರ್ಗ 02 : ಶ್ರೀಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಶೇರುದಾರರಿಗೆ ಸಿಹಿ ನೀಡಬೇಕೆನ್ನುವ ಉದ್ಧೇಶದಿಂದ ಪ್ರತಿ ವರ್ಷ ಪಂಚಮಿ ಹಬ್ಬದ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗುತ್ತಿದೆ ಎಂದು ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು. 

ತಾಲೂಕಿನ ಖಾನಪೇಠದ ಶ್ರೀಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಶೇರುದಾರರಿಗೆ ಕ್ವಿಂಟಲ್ ಸಕ್ಕರೆಗೆ ರೂ.2 ಸಾವಿರ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸುವ 12ನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನೇಕ ಸಕ್ಕರೆ ಕಾರ್ಖಾನೆಗಳು ನಷ್ಟವನ್ನು ಅನುಭವಿಸುತ್ತಿರುವ ಕಾಲದಲ್ಲಿ ಕಾರ್ಖಾನೆಯನ್ನು ಲೀಸ್ ಪಡೆದ ಪ್ಯಾರಿ ಶುಗರ​‍್ಸ‌ ಆಡಳಿತ ಮಂಡಳಿಗೆ ನಷ್ಟವಾದರೂ ಪ್ರತಿ ವರ್ಷ ಕಾರ್ಖಾನೆ ರೈತರಿಗೆ ಸಿಹಿ ನೀಡುತ್ತಿದೆ. ದೇಶದಲ್ಲಿರುವ ಯಾವುದೇ ಸಕ್ಕರೆ ಕಾರ್ಖಾನೆಗೂ ಧನಲಕ್ಷ್ಮೀ ಕಾರ್ಖಾನೆ ಮುಂಚೂಣಿಗೆ ಬರುತ್ತದೆ ಎಂದರು. 

ಈ ಭಾಗದಲ್ಲಿ ಬೃಹತ್ ಸಕ್ಕರೆ ಕಾರ್ಖಾನೆ ನಿರ್ಮಿಸಿ, ರೈತರ ಹಿತ ಕಾಯುವ ಕೆಲಸ ಮಾಡಿದ ಅಂದಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ. ಬಿ. ಹಿರೇರಡ್ಡಿ, ನಂತರದ ದಿನಗಳಲ್ಲಿ ಕಾರ್ಖಾನೆ ಮುನ್ನಡೆಸುವಲ್ಲಿ ಯಶಸ್ವಿಯಾದ ಸಹೋದರ ಮಹಾದೇವಪ್ಪ ಯಾದವಾಡ ಅವರು ಎರಡು ಕಣ್ಣುಗಳಿದ್ದಂತೆ ಎಂದು ಬಣ್ಣಿಸಿದರು.  ಆಗಸ್ಟ್‌ 15ರ ವರೆಗೆ ಭಾನುವಾರ ಹೊರತು ಪಡಿಸಿ ಪ್ರತಿ ಶೇರ್‌ಗೆ 1 ಕ್ವಿಂಟಾಲ್ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು. 

ಮಾಜಿ ಶಾಸಕ ಹಾಗೂ ಕಾರ್ಖಾನೆ ಮಾಜಿ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಮಾತನಾಡಿ, ಶೇರುದಾರರ ಹಿತಕಾಯಲು ಕಳೆದ 12 ವರ್ಷಗಳಿಂದ ಸಕ್ಕರೆ ವಿತರಿಸಲಾಗುತ್ತಿದ್ದು, ಮುಂದೆ ನಮ್ಮ ಜೀವಿತದ ಅವಧಿವರೆಗೂ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸುವುದಾಗಿ ತಿಳಿಸಿದರು.  ತೊರಗಲ್ಲ ಹಚ್ಚಿನ ಮಠದ ಶ್ರೀಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಬಿ.ಎಂ. ತುಪ್ಪದ, ಐ.ಎಸ್‌. ಹರಣಟ್ಟಿ, ಎಂ.ಎಂ. ಆತಾರ, ಶ್ರೀನಿವಾಸ ಕರದಿನ, ಟಿ.ಬಿ. ಪಾಟೀಲ, ಶಂಭು ಮಾಳವಾಡ, ಎ.ಸಿ. ಸುರಗ, ಸುರೇಶ ಡುಳ್ಳೊಳ್ಳಿ, ಕಾರ್ಖಾನೆ ಅಧಿಕಾರಿಗಳು, ಸಿಬ್ಬಂದಿ ಇದ್ದರು. 


ಸುದ್ದಿ ಓದಿ