ಕಾಗವಾಡ

ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಕಂಪಾಸ್ ಬಾಕ್ಸ್‌ ವಿತರಣೆ

ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಕಂಪಾಸ್ ಬಾಕ್ಸ್‌ ವಿತರಣೆ

ಲೋಕದರ್ಶನ ವರದಿ 

 ಕಾಗವಾಡ 25 : ತಾಲ್ಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ಗುರುವಾರ ಶಾಲಾ ಬ್ಯಾಗ್ ಹಾಗೂ ಕಂಪಾಸ್ ಬಾಕ್ಸ್ಗಳನ್ನು ವಿತರಿಸಲಾಯಿತು.  

ರಾಯಬಾಗ್ ಪಟ್ಟಣದ ಕೃಷ್ಣಾ ಗೋದಾವರಿ ಫರ್ಟಿಲೈಸರ್ಸ್‌ ಮಾಲೀಕರಾದ ಕೈಲಾಶ್ ಪುರಮವಾಡ ಹಾಗೂ ಶಶಿಕಾಂತ ಪುರಮವಾಡ ಸಹೋದರರು ಸನ್ಮತಿ ವಿದ್ಯಾಲಯದ 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ 9 ಮತ್ತು 10ನೇ ತರಗತಿಗಳಿಗೆ ಹೊಸದಾಗಿ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಕಂಪಾಸ್ ಬಾಕ್ಸ್‌ ಹಾಗೂ ಶಾಲಾ ಬ್ಯಾಗ್ಗಳನ್ನು ಕಾಣಿಕೆಯಾಗಿ ನೀಡಿದರು.  

ಸಂಸ್ಥೆಯ ಅಧ್ಯಕ್ಷ ವಿನೋದ ಬರಗಾಲೆ ಹಾಗೂ ಮುಖ್ಯಾಧ್ಯಾಪಕರು ವಿದ್ಯಾರ್ಥಿಗಳಿಗೆ ಅವುಗಳನ್ನು ವಿತರಿಸಿದರು. ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿದ ಪುರಮವಾಡ ಸಹೋದರರಿಗೆ ಸನ್ಮತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನೋದ ಬರಗಾಲೆ, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಶಿಕ್ಷಕಿ ಎಂ.ಎನ್‌. ಕಾಳೇನಟ್ಟಿ ಹಾಗೂ ಶಿಕ್ಷಕರು ಕೃತಜ್ಞತೆ ಸಲ್ಲಿಸಿದರು. 


ಸುದ್ದಿ ಓದಿ