ಕೈಮಗ್ಗ ನೇಕಾರರಿಗೆ ವಿಮೋರ್ ಫೌಂಡೇಶನ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ
ಮಹಾಲಿಂಗಪುರ 25: ಸ್ಥಳೀಯ ಜವಳಿ ಬಜಾರದ ದಾನೇಶ್ವರಿ ಕೈಮಗ್ಗ ಬಟ್ಟೆ ಉತ್ಪಾದಕ ಘಟಕದ ನೇಕಾರರಿಗೆ ಬೆಂಗಳೂರಿನ ವಿಮೋರ್ ಹ್ಯಾಂಡಲೂಮ್ ಫೌಂಡೇಶನ್ ವತಿಯಿಂದ ಕೈ ಮಗ್ಗ ಬಡ ನೇಕಾರರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಜೋಳ, ಗೋಧಿಹಿಟ್ಟು, ಬೆಲ್ಲ, ರವೆ, ಕಡ್ಲಿಬೇಳೆ, ಅಡುಗೆ ಎಣ್ಣೆ, ಅವಲಕ್ಕಿ ಸೇರಿದ ಉಚಿತ ರೇಶನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ, ಅಳಿವಿನ ಅಂಚಿನಲ್ಲಿರುವ ಕೈಮಗ್ಗ ನೇಕಾರಿಕೆಗೆ ಶಿವಶಂಕರ ಮೂಡಲಗಿ ವಿಮೋರ್ ಮೂಲಕ ತಮ್ಮ ಘಟಕದ ನೇಕಾರರಿಗೆ ಕಿಟ್ ನೀಡಿದ್ದು ಶ್ಲಾಘನೀಯ. ಸರಕಾರ ನೇಕಾರ ಸಮ್ಮಾನ ಯೋಜನೆಯಲ್ಲಿ ವರ್ಷಕ್ಕೆ 10 ಸಾವಿರ ನೀಡಬೇಕು. ನೇಕಾರರಿಗೆ ಕನಿಷ್ಟ 50 ಸಾವಿರ ಶೂನ್ಯ ಬಡ್ಡಿ ದರದ ಸಾಲ ನೀಡಬೇಕು. ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆ ಸೌಕರ್ಯ ನೀಡುವಂತಾಗಬೇಕು. ಇದರಿಂದ ಜವಳಿ ಉದ್ದಿಮೆ ಬೆಳೆದು ದೇಶದ ಜಿಡಿಪಿ ಕೂಡ ಬೆಳೆಯುತ್ತದೆ ಎಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ ಒತ್ತಾಯಿಸಿದರು.
ಹಿರಿಯರಾದ ರಾಮಣ್ಣ ಮುಗಳಖೋಡ, ಮಲ್ಲಪ್ಪ ನಡಕಟ್ಟಿ, ರಾಮಣ್ಣ ದಮಾಮಿ, ಗೊಡಚೆಪ್ಪ ಹುಣಶ್ಯಾಳ, ಮಲ್ಲಪ್ಪ ಕುಂದರಗಿ, ಗಿರಿಮಲ್ಲಪ್ಪ ಕೊಣ್ಣೂರ ಇದ್ದರು.