ಬಾಲಕಾರ್ಮಿಕ ಮಕ್ಕಳ ಪೋಷಕರಿಗೆ ಆಹಾರ ಸಾಮಗ್ರಿಗಳ ವಿತರಣೆ
ಬಾಲಕಾರ್ಮಿಕ ಮಕ್ಕಳ ಪೋಷಕರಿಗೆ ಆಹಾರ ಸಾಮಗ್ರಿಗಳ ವಿತರಣೆ
ಬಳ್ಳಾರಿ 03: ಅಜೀಮ್ ಪ್ರೇಮ್‍ಜೀ ಪೌಂಡೇಷನ್ ವತಿಯಿಂದ ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮತ್ತು ಬಿ.ಡಿ.ಡಿ.ಎಸ್ ಬಾಲಕಾರ್ಮಿಕರ ತರಬೇತಿ ಕೇಂದ್ರದ ಸಹಯೋಗದಲ್ಲಿ ಬಿ.ಡಿ.ಡಿ.ಎಸ್. ಬಾಲಕಾರ್ಮಿಕರ ತರಬೇತಿ ಕೇಂದ್ರದಲ್ಲಿ ಓದುತ್ತಿರುವ ಬಾಲಕಾರ್ಮಿಕ ಮಕ್ಕಳ ಪೋಷಕರಿಗೆ ಆಹಾರ ಸಾಮಾಗ್ರಿ ಕಿಟ್‍ಗಳನ್ನು ಶನಿವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಅಲ್ತಾಪ್ ಅಹಮ್ಮದ್, ನಿವೃತ್ತ ಕಾರ್ಮಿಕ ಅಧಿಕಾರಿಗಳಾದ ಚಂದ್ರಶೇಖರ್ ಎನ್ ಐಲಿ, ಕಾರ್ಮಿಕ ನಿರೀಕ್ಷಕರಾದ ರಾಜೇಶ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಎ.ಮೌನೇಶ್, ಬಿ.ಡಿ.ಡಿ.ಎಸ್. ಬಾಲಕಾರ್ಮಿಕ ತರಬೇತಿ ಕೇಂದ್ರದ ನಿರ್ದೇಶಕರಾದ ಫಾ.ಯಾಗಪ್ಪ ಮತ್ತು ಇತರರು ಇದ್ದರು.
ಜು. 4ರಂದು ವಿದ್ಯುತ್ ವ್ಯತ್ಯಯ
ಹೊಸಪೇಟೆ(ವಿಜಯನಗರ) 03: 110/11ಕೆ.ವಿ.ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಜು.4ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸಪೇಟೆ ಗ್ರಾಮೀಣ ಶಾಖಾ ವ್ಯಾಪ್ತಿಗೆ ಒಳಪಡುವ ಕಾಕುಬಾಳ, ಗುಂಡ್ಲುವದ್ದಿಗೇರಿ, ಕಲ್ಲಹಳ್ಳಿ ಮತ್ತು ರಾಜಾಪುರದ ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ಪಂಪ್‍ಸೆಟ್ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದ್ದು, ರೈತರು, ವಿದ್ಯುತ್ ಗ್ರಾಹಕರು ಸಹಕರಿಸುಂತೆ ಅವರು ಕೋರಿದ್ದಾರೆ.