ಎಲಬುರ್ಗ

ಕೋವಿಡ್ ಸೋಂಕಿತರಿಗೆ ಉಪಹಾರ ವಿತರಣೆ

ಕೋವಿಡ್ ಸೋಂಕಿತರಿಗೆ ಉಪಹಾರ ವಿತರಣೆ

ಯಲಬುರ್ಗಾ 31: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಕೋವಿಡ್ ಕೇಂದ್ರಕ್ಕೆ ನವೀನ್ ಗುಳಗಣ್ಣ ಅಭಿಮಾನಿ ಬಳಗದಿಂದ ಉಪಹಾರವನ್ನು ಕೋವಿಡ್ ಸೋಂಕಿತರಿಗೆ ವಿತರಿಸಲಾಯಿತು. ಹಾಗೆಯೇ ತಾಲೂಕಿನ ಬೇವೂರು ಗ್ರಾಮದಲ್ಲಿ ತೆರೆಯಲಾದ ಕೋವಿಡ್ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಂಗಮ್ಮ ಈಶಣ್ಣ ಗುಳಗಣ್ಣನವರ್ ಬೇಟಿ ನೀಡಿ ಕೊರೋನಾ ಸೋಂಕಿತರಿಗೆ ಆಹಾರವನ್ನು ವಿತರಣೆ ಮಾಡಿದರು. 

ಬಳಿಕ ಮಾತನಾಡಿದ ಅವರು, ಈಗಾಗಲೇ ಕಾಣಿಸಿಕೊಂಡ ಮಹಾಮಾರಿ ಕೊರೋನಾ ರೋಗದಿಂದ ಕಾಣಿಸಿಕೊಂಡ ಹಿನ್ನೆಲೆ ಕೋವಿಡ್ ಸೋಂಕಿತರು ದೈರ್ಯವಾಗಿ ಜೀವನ ನಡೆಸಬೇಕು. ಸೋಂಕಿತರಿಗೆ ಉಪಹಾರವನ್ನು ಈಗಾಗಲೇ ವಿತರಣೆ ಮಾಡಲಾಗಿದ್ದು, ಪ್ರತಿಯೊಬ್ಬ ಸೋಂಕಿತರು ತಮ್ಮ ದೈರ್ಯಶಾಲಿಯಿಂದ ಮುನ್ನುಗ್ಗಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ ಮುರಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರಕಾಶ ಕಾರಟಗಿ, ಮುಖಂಡರಾದ ಮಂಜು ಕೋವಿ, ಹೇಮಂತ ಹಂಚಿ, ದ್ಯಾಮಣ್ಣ ಬೇವೂರು, ಶಿವು ಚರಾರಿ, ಶರಣಪ್ಪ ಮಾಳಗಿ, ಶರಣಗೌಡ ಪಾಟೀಲ್, ಬಸಯ್ಯ ಮೈಸೂರಮಠ, ಶಿವಾರಾಜ ಕುಂಬಾರ, ವೆಂಕಟೇಶ ಪಾಪಳೆ, ಮಾಂತೇಶ ಸಂಕನೂರ್, ಬಸವರಾಜ ಮಾಲಿಪಾಟೀಲ್, ಜಗಧೀಶ್ ಸಂಕನೂರ ಸೇರಿ ಮತ್ತಿತರಿದ್ದರು. 


ಸುದ್ದಿ ಓದಿ