ಸುಟ್ಟುಕೊಂಡ ಯುವಕ ಪವನಗೆ ಸಹಾಯ ಧನ ವಿತರಣೆ
ಕಕ್ಕೇರಿ 05: ಖಾನಾಪುರ ತಾಲೂಕಿನ ಗುಂಜಿ ವಲಯದ ಗಂಗಾವಳಿ ಗ್ರಾಮದ ಮಾತೋಶ್ರೀ ಸಂಘದ ಸದಸ್ಯೆ ಎಲ್ಲೂಬಾಯಿ ಕದಂಬ ಅವರ ಮಗ ಪವನ ಕದಂಬ ಅವರಿಗೆ ಆಕಸ್ಮಿಕ ಬೆಂಕಿ ತಗುಲಿ ಮೈಯೆಲ್ಲಾ ಸುಟ್ಟು ಅಪಘಾತವಾಗಿದೆ.
ಇದನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು 10000/-ರೂ ಗಳ ಸಹಾಯಧನ ಮಂಜೂರು ಮಾಡಿದ್ದು ಸಹಾಯಧನದ ಚೆಕ್ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಹಾಗೂ ತಾಲ್ಲೂಕು ಯೋಜನಾಧಿಕಾರಿ ರಿಯಾಜ್ ಅತ್ತಾರ ವಿತರಣೆ ಮಾಡಿದರು. ಸಹಾಯಧನ ಚೆಕ್ ಪಡೆದ ಕುಟುಂಬದವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಜ್ಞಾನೇಶ್ವರ ಧಾಮಣೆಕರ, ಸೇವಾ ಪ್ರತಿನಿಧಿ ದೀಪಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.