ಬಿಜೆಪಿ ಗೂಡ್ಸೆ ವಕ್ತಾರರಂತೆ ವರ್ತಿಸುತ್ತಿದೆ : ಕಾಂಗ್ರೆಸ್
ಬೆಂಗಳೂರು,ಅ 5: ಅಹಿಂಸಾ ಹೋರಾಟದ ನೆಲದಲ್ಲಿ ಭಾರತೀಯ ಜನತಾ ಪಕ್ಷ ಹಿಂಸೆಗೆ ನಿತ್ಯ ತುಪ್ಪ ಸುರಿಯುತ್ತಿದೆ, ಪ್ರಚೋದನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ಮಾಡಿದ್ದಾರೆ .
ಈ ಕುರಿತು ಟ್ವೀಟ್ ಮಾಡಿದ ಅವರು, ಭಾರತ ಅಹಿಂಸಾ ಹೋರಾಟದ ಭೂಮಿ. ದೇಶ ಬ್ರಿಟಿಷ್ ದಾಸ್ಯದಿಂದ ಬಿಡುಗಡೆಯಾಗಿದ್ದು ಅಹಿಂಸಾ ಹೋರಾಟದ ಮೂಲಕವೇ. ನೋಬೆಲ್ ಪುರಸ್ಕೃತ ಮಂಡೇಲಾ ಹೋರಾಟಕ್ಕೂ ಪ್ರೇರಣೆಯಾಗಿದ್ದು ಗಾಂಧಿಜೀಯವರ ಅಹಿಂಸಾ ಹೋರಾಟವೇ ಹೊರತು ಗೋಡ್ಸೆಯ ನೆತ್ತರ ಪರಂಪರೆಯಲ್ಲ. ಆದರೆ ಬಿಜೆಪಿ ಇಂದು ಗೂಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ.
ಯುಪಿ ಘಟನೆ ಕುರಿತು ಸರಣಿ ಟ್ವೀಟ್ ಮಾಡಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.ಸತ್ಯಾಗ್ರಹ ಯಾವಾಗಲೂ ಸತ್ಯದ ಮಾರ್ಗದ ಮೂಲಕ ನ್ಯಾಯ ಪಡೆಯುವ ಚಳವಳಿ. ದೇಶದ ರೈತರು ಕಳೆದ ಒಂದು ವರ್ಷದಿಂದ ಸತ್ಯಾಗ್ರಹದ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಯುಪಿ ಸರ್ಕಾರ ರೈತರ ಮಾರಣ ಹೋಮದ ಮೂಲಕ ಚಳವಳಿ ಹತ್ತಿಕ್ಕಿ . ರೈತರ ನ್ಯಾಯ ಪರ ಹೋರಾಟವನ್ನು ದಮನ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ದೂರಿದಿದ್ದಾರೆ.