ಮಧುಮೇಹ : ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತ
ಕೋಲ್ಕತಾ, ಸೆ 24 (ಯುಎನ್‌ಐ) ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದ್ದು, 77 ದಶಲಕ್ಷ ಪ್ರಕರಣಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಸಂಖ್ಯೆ 2030 ರ ವೇಳೆಗೆ 100 ದಶಲಕ್ಷಕ್ಕೂ ಹೆಚ್ಚುವ ಆತಂಕ ಎದುರಾಗಿದೆ. ಮಧುಮೇಹ ಕಣ್ಣಿನ ಕಾಯಿಲೆ ಹೊಂದಿರುವ ರೋಗಿಗಳಲ್ಲಿ ಮಧ್ಯಮ ದೃಷ್ಟಿ ನಷ್ಟಕ್ಕೆ ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ (ಡಿಎಂಇ) ಸಾಮಾನ್ಯ ಕಾರಣವಾಗಿದೆ, ಮತ್ತು ಮುಂದಿನ ಎರಡು ದಶಕಗಳಲ್ಲಿ 22.4 ಮಿಲಿಯನ್ ಭಾರತೀಯರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ (ಡಿಎಂಇ) ಗೆ ಚಿಕಿತ್ಸೆ ನೀಡಲು ಇಂಟ್ರಾವಿಟ್ರೀಯಲ್ ಅಫ್ಲಿಬೆರ್ಸೆಪ್ಟ್ (ಐಲಿಯಾ) ಇಂಜೆಕ್ಷನ್ ಪರಿಹಾರಕ್ಕಾಗಿ ಹೊಸ ಸೂಚನೆಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದೆ ಎಂದು ಭಾರತದಲ್ಲಿ ಬೇಯರ್ ಇಂದು ಪ್ರಕಟಿಸಿದೆ.ಇಂಟ್ರಾವಿಟ್ರೀಯಲ್ ಬಳಕೆಗಾಗಿ ಅಫ್ಲಿಬರ್ಸೆಪ್ಟ್ ಇಂಜೆಕ್ಷನ್ ಅನುಮೋದನೆಯು ಡಿಎಂಇ ರೋಗಿಗಳಿಗೆ ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳಿಗೆ ಹೊಸ ಮತ್ತು ಪರ್ಯಾಯ ಚಿಕಿತ್ಸಾ ಆಯ್ಕೆಯನ್ನು ಒದಗಿಸುತ್ತದೆ.
ಬೇಯರ್ ಝಿಡಸ್ ಫಾರ್ಮಾದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಸಕ್ಸೇನಾ, "ಭಾರತವು ಅತಿಹೆಚ್ಚು ಮಧುಮೇಹಿಗಳನ್ನು ಹೊಂದಿದ್ದು, ಈ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಕಡಿಮೆ ಮಟ್ಟದ ಅರಿವು ಮತ್ತು ಸ್ಥಿತಿಯ ಪರಿಣಾಮವಾಗಿ ದೃಷ್ಟಿ-ಸಂಬಂಧಿತ ತೊಡಕುಗಳ ರೋಗನಿರ್ಣಯವನ್ನು ಹೊಂದಿದೆ." ಎಂದು ಹೇಳಿದ್ದಾರೆ."ಮಧುಮೇಹ ಹೊಂದಿರುವವರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಸೇರಿದ್ದು, ಇವರನ್ನು ಅವಲಂಬಿಸಿರುವ ಕುಟುಂಬಗಳು ಆರ್ಥಿಕ ತೊಡಕಿಗೆ ಒಳಗಾಗುವುದರಿಂದ ಸಾಮಾಜಿಕ ಹೊರೆ ಹೆಚ್ಚು." "ಮಧುಮೇಹ ಹಾಗೂ ದೃಷ್ಟಿನಷ್ಟದಿಂದ ಹೊರಗುಳಿಯಲು ಇಂಟ್ರಾವಿಟ್ರೀಯಲ್ ಅಫ್ಲಿಬೆರ್ಸೆಪ್ಟ್ (ಐಲಿಯಾ) ಸಹಕರಿಸುತ್ತದೆ. ರೋಗಿಗಳು ತಮ್ಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಮತ್ತು ಓದುವಿಕೆ, ಕೆಲಸ ಮತ್ತು ಚಾಲನೆಯಂತಹ ಪ್ರಮುಖ ದೈನಂದಿನ ಚಟುವಟಿಕೆಗಳಲ್ಲಿ ಎಂದಿನಂತೆ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ” ಎಂದು ಮನೋಜ್ ಸಕ್ಸೇನಾ ತಿಳಿಸಿದ್ದಾರೆ.