ಮಹಲಿಂಗಪುರ

ಮಹಾಲಿಂಗಪುರದಿಂದ ಕುಲಗೋಡಿಗೆ ಭಕ್ತಿಪೂರ್ವಕ ಪಾದಯಾತ್ರೆ

ಮಹಾಲಿಂಗಪುರದಿಂದ ಕುಲಗೋಡಿಗೆ ಭಕ್ತಿಪೂರ್ವಕ ಪಾದಯಾತ್ರೆ

ಲೋಕದರ್ಶನ ವರದಿ 

ಮಹಾಲಿಂಗಪುರ 13 :  ಅಧಿಕ ಮಾಸದ ಕೊನೆಯ ಶನಿವಾರದ ಅಂಗವಾಗಿ ಬಲಭೀಮ ಪಾದಯಾತ್ರಾ ಮಂಡಳಿ ವತಿಯಿಂದ ಮಹಾಲಿಂಗಪುರದಿಂದ ಕುಲಗೋಡಿವರೆಗೆ ಭಕ್ತಿಪೂರ್ವಕ ಪಾದಯಾತ್ರೆ ನಡೆಯಿತು.  ಪಾದಯಾತ್ರೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಭಕ್ತರು ಉತ್ಸಾಹದಿಂದ ಪಾಲ್ಗೊಂಡು ಭಜನೆ, ನಾಮಸ್ಮರಣೆಗಳೊಂದಿಗೆ ಸಾಗಿದರು. ಭಕ್ತರ ಸಂಭ್ರಮ ಮತ್ತು ಭಕ್ತಿಭಾವದ ವಾತಾವರಣ ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಭಕ್ತರು ಹಾಗೂ ಆಯೋಜಕರಿಗೆ ಬಲಭೀಮ ಪಾದಯಾತ್ರಾ ಮಂಡಳಿ ಕೃತಜ್ಞತೆ ಸಲ್ಲಿಸಿದೆ.  


ಸುದ್ದಿ ಓದಿ